ಉನ್ನತ ಹುದ್ದೆಗಳಿಗೆ 3 ಭಾರತೀಯ ಅಮೆರಿಕನ್ನರನ್ನು ನೇಮಿಸಿದ ಟ್ರಂಪ್

Update: 2019-01-17 16:12 GMT

ವಾಶಿಂಗ್ಟನ್, ಜ. 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂವರು ಭಾರತೀಯ ಅಮೆರಿಕನ್ನರನ್ನು ಆಡಳಿತದ ಉನ್ನತ ಹುದ್ದೆಗಳಿಗೆ ನೇಮಿಸಿದ್ದಾರೆ.

ರೀಟಾ ಬರನ್ವಾಲ್‌ರನ್ನು ಸಹಾಯಕ ಇಂಧನ ಕಾರ್ಯದರ್ಶಿ (ಪರಮಾಣು ಇಂಧನ)ಯಾಗಿ, ಆದಿತ್ಯ ಬಮ್‌ಝೈ ಅವರನ್ನು ಖಾಸಗಿ ಮತ್ತು ನಾಗರಿಕ ಹಕ್ಕುಗಳ ಉಸ್ತುವಾರಿ ಸಮಿತಿಯ ಸದಸ್ಯನಾಗಿ ಹಾಗೂ ಬಿಮಲ್ ಪಟೇಲ್‌ರನ್ನು ಸಹಾಯಕ ಖಜಾನೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಈ ಮೂವರು ಭಾರತೀಯ ಅಮೆರಿಕನ್ನರನ್ನು ನೇಮಿಸುವ ಇಂಗಿತವನ್ನು ಟ್ರಂಪ್ ಈಗಾಗಲೇ ವ್ಯಕ್ತಪಡಿಸಿದ್ದರು. ಆದರೆ ಅವರ ನೇಮಕಾತಿಗಳ ಪಟ್ಟಿಯನ್ನು ಬುಧವಾರ ಸೆನೆಟ್‌ಗೆ ಕಳುಹಿಸಲಾಗಿದೆ.

ಟ್ರಂಪ್ ಈವರೆಗೆ ತನ್ನ ಆಡಳಿತದಲ್ಲಿನ ಮಹತ್ವದ ಹುದ್ದೆಗಳಿಗೆ 35ಕ್ಕೂ ಅಧಿಕ ಭಾರತೀಯ ಅಮೆರಿಕನ್ನರನ್ನು ನೇಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News