ಶೀಘ್ರದಲ್ಲಿ ಅಮಿತ್ ಶಾ ಬಿಡುಗಡೆ: ಬಿಜೆಪಿ

Update: 2019-01-17 17:14 GMT

ಹೊಸದಿಲ್ಲಿ, ಜ. 17: ಏಮ್ಸ್‌ನಲ್ಲಿ ಹಂದಿ ಜ್ವರಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಿಜೆಪಿ ವರಿಷ್ಠ ಅಮಿತ್ ಶಾ ಗುಣಮುಖರಾಗಿದ್ದಾರೆ ಹಾಗೂ ಅವರು ಒಂದೆರೆಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಜ್ವರ ಹಾಗೂ ಎದೆಯಲ್ಲಿ ಕಫ ಕಟ್ಟಿಕೊಂಡ ಹಿನ್ನೆಲೆಯಲ್ಲಿ ಅಮಿತ್ ಶಾ ಅವರನ್ನು ಏಮ್ಸ್‌ನ ಹಳೆಯ ಖಾಸಗಿ ವಾರ್ಡ್‌ನಲ್ಲಿ ಬುಧವಾರ ರಾತ್ರಿ ದಾಖಲಿಸಲಾಗಿತ್ತು. ಅವರು ಟ್ವೀಟ್ ಮೂಲಕ ಜನರಿಗೆ ಅನಾರೋಗ್ಯದ ಬಗ್ಗೆ ತಿಳಿಸಿದ್ದರು. ‘‘ನನಗೆ ಹಂದಿ ಜ್ವರ ಇರುವುದಾಗಿ ವೈದ್ಯಕೀಯ ತಪಾಸಣೆ ತಿಳಿಸಿದೆ. ಚಿಕಿತ್ಸೆ ನಡೆಯುತ್ತಿದೆ. ದೇವರ ದಯೆ, ನಿಮ್ಮ ಪ್ರೀತಿ ಹಾಗೂ ಹಾರೈಕೆಯಿಂದ ನಾನು ಶೀಘ್ರ ಗುಣಮುಖವಾಗಲಿದ್ದೇನೆ’’ ಎಂದು ಶಾ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News