ಜಿಡಿಪಿ ಗಾತ್ರ ಹೆಚ್ಚುತ್ತಿರುವುದರಿಂದ ಇನ್ನಷ್ಟು ಕರೆನ್ಸಿ ಅಗತ್ಯವಾಗಬಹುದು: ಆರ್‌ಬಿಐ ಅಧಿಕಾರಿ,

Update: 2019-01-17 17:16 GMT

ಕೋಲ್ಕತಾ,ಜ.17: ದೇಶದ ಜಿಡಿಪಿ ಗಾತ್ರವು ಪ್ರಮಾಣಾತ್ಮಕವಾಗಿ ಹೆಚ್ಚುತ್ತಿರುವುದರಿಂದ ಆರ್ಥಿಕತೆಯಲ್ಲಿ ಇನ್ನಷ್ಟು ಕರೆನ್ಸಿ ಅಗತ್ಯವಾಗಬಹುದು ಎಂದು ಆರ್‌ಬಿಐ ಅಧಿಕಾರಿಯೋರ್ವರು ಗುರುವಾರ ಇಲ್ಲಿ ಹೇಳಿದರು.

ನವೆಂಬರ್,2016ರಲ್ಲಿ ಸರಕಾರವು 500 ಮತ್ತು 1,000 ರೂ.ನೋಟುಗಳನ್ನು ನಿಷೇಧಿಸಿದ ಬಳಿಕ ವ್ಯವಸ್ಥೆಯಲ್ಲಿ ಕರೆನ್ಸಿಯ ಕೊರತೆಯುಂಟಾಗಿತ್ತು. ಈಗ ಜಿಡಿಪಿ ಗಾತ್ರ ಹೆಚ್ಚುತ್ತಿರುವುದರಿಂದ ವ್ಯವಸ್ಥೆಯಲ್ಲಿ ಇನ್ನಷ್ಟು ಕರೆನ್ಸಿಯ ಬಿಡುಗಡೆ ಅಗತ್ಯವಾಗಬಹುದು ಎಂದ ಅವರು,ನಕಲಿ ನೋಟುಗಳ ಹಾವಳಿಯು ಕಡಿಮೆಯಾಗುತ್ತಿದೆ ಮತ್ತು ಈಗ ಚಲಾವಣೆಯಲ್ಲಿ ಇದ್ದಿರಬಹುದಾದ ನಕಲಿ ನೋಟುಗಳು ಅತ್ಯಂತ ಕಚ್ಚಾ ಸ್ವರೂಪದ್ದಾಗಿವೆ ಎಂದರು.

ಠೇವಣಿಗಳನ್ನು ಸ್ವೀಕರಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಡಿಜಿಟಲ್ ಓಂಬುಡ್ಸ್‌ಮನ್ ಸೇರ್ಪಡೆಯ ಜೊತೆಗೆ ಓರ್ವ ಪ್ರತ್ಯೇಕ ಓಂಬುಡ್ಸ್‌ಮನ್ ಅನ್ನು ಆರ್‌ಬಿಐ ನೇಮಕಗೊಳಿಸಲಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು.

ಕಿರು,ಸಣ್ಣ ಮತ್ತು ಮಧ್ಯಮ ಉಧ್ಯಮಗಳು ಹೆಚ್ಚಿನ ತೊಂದರೆಗಳಿಲ್ಲದೆ ಬ್ಯಾಂಕ್ ಸಾಲಗಳನ್ನು ಪಡೆಯುವಂತಾಗಲು ತಜ್ಞರ ಸಮಿತಿಯೊಂದನ್ನು ಆರ್‌ಬಿಐ ರೂಪಿಸಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News