ಯುನಿವೆಫ್ ನಿಂದ ಉಳ್ಳಾಲದಲ್ಲಿ ಸೀರತ್ ಸಮಾವೇಶ

Update: 2019-01-17 17:38 GMT

ಮಂಗಳೂರು, ಜ. 17: ಯುನಿವೆಫ್ ಕರ್ನಾಟಕ ನ. 30 ರಿಂದ ಫೆ. 1ರವರೆಗೆ "ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ ಪ್ರವಾದಿ ಮುಹಮ್ಮದ್ (ಸ) ರ ದೃಷ್ಟಿಯಲ್ಲಿ" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಉಳ್ಳಾಲದ ನಗರ ಸಭಾ ಮೈದಾನದಲ್ಲಿ ಸೀರತ್ ಸಮಾವೇಶ ಜರಗಿತು.

"ವರ್ತಮಾನದ ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಆರೋಪದ ಮೇಲೆ ಆರೋಪ ಹೊರಿಸಿ, ಸಮುದಾಯವನ್ನು ರೊಚ್ಚಿಗೆಬ್ಬಿಸಲು ಹಿಟ್ ಆ್ಯಂಡ್ ರನ್ ತಂತ್ರವನ್ನು ಇಸ್ಲಾಮೀ ವಿರೋಧಿ ಶಕ್ತಿಗಳು ಅನುಸರಿಸುತ್ತಾ ಬಂದಿರುವುದು ಫ್ಯಾಸಿಸ್ಟ್ ತಂತ್ರದ ಒಂದು ಭಾಗ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೌಲಾನಾ ಅಬ್ದುರ್ರಹ್ಮಾನ್ ಕಿರಾಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಮತ್ತು ಸಂಚಾಲಕ ಅಬ್ದುಲ್ಲಾ ಪಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೈಫುದ್ದೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News