ಪಾಕ್‌ಗೆ ದುರ್ಬಲ, ಅಸ್ಥಿರ ಅಫ್ಘಾನ್ ಬೇಕು: ಅಮೆರಿಕ ಕಾಂಗ್ರೆಸ್ ವರದಿ

Update: 2019-01-18 14:43 GMT

ವಾಶಿಂಗ್ಟನ್, ಜ. 18: ಬಲಿಷ್ಠ ಹಾಗೂ ಏಕೀಕೃತ ಅಫ್ಘಾನಿಸ್ತಾನಕ್ಕೆ ಬದಲು ದುರ್ಬಲ ಹಾಗೂ ಅಸ್ಥಿರ ಅಫ್ಘಾನಿಸ್ತಾನ ತನಗೆ ಪೂರಕ ಎಂಬುದಾಗಿ ಪಾಕಿಸ್ತಾನ ಭಾವಿಸಬಹುದಾಗಿದೆ ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವರದಿಯೊಂದು ಹೇಳಿದೆ.

ತಾಲಿಬಾನ್ ಜೊತೆಗೆ ಶಾಂತಿ ಮಾತುಕತೆ ನಡೆಸುವ ಪ್ರಯತ್ನಗಳನ್ನು ಪಾಕಿಸ್ತಾನದ ನೆರವಿನೊಂದಿಗೆ ತೀವ್ರಗೊಳಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ‘ಅಫ್ಘಾನಿಸ್ತಾನ: ಬ್ಯಾಕ್‌ಗ್ರೌಂಡ್ ಆ್ಯಂಡ್ ಯುಎಸ್ ಪಾಲಿಸಿ ಇನ್ ಬ್ರೀಫ್’ ಎಂಬ ತಲೆಬರಹದ ವರದಿಯನ್ನು ಕಾಂಗ್ರೆಶನಲ್ ರಿಸರ್ಚ್ ಸರ್ವಿಸ್ (ಸಿಆರ್‌ಎಸ್) ಸಿದ್ಧಪಡಿಸಿದೆ.

ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ರಾಯಭಾರಿ ಝಲ್ಮಾಯ್ ಖಲೀಲ್‌ಝಾದ್, ತಾಲಿಬಾನ್ ಮತ್ತು ಅಫ್ಘಾನ್ ಸರಕಾರದ ನಡುವೆ ಪ್ರಪ್ರಥಮ ನೇರ ಮಾತುಕತೆಗಳನ್ನು ಏರ್ಪಡಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಅವರು ಗುರುವಾರ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ಜೊತೆಗೆ ಮಾತುಕತೆಗಳನ್ನು ನಡೆಸಿದರು. ಅದಕ್ಕೂ ಮೊದಲು ಅವರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News