ಕಸ್ಟಮರ್ ಕೇರ್ ಕರೆ ಮಾಡಿದಾಗ ಬ್ಯಾಂಕ್ ಖಾತೆಯೇ ಹ್ಯಾಕ್ !

Update: 2019-01-18 16:31 GMT

ಮಂಗಳೂರು, ಜ.18: ವೆಬ್‌ಸೈಟ್‌ವೊಂದರಲ್ಲಿ ವಾಚ್‌ ಖರೀದಿಸಲು ಮುಂದಾಗಿದ್ದ ವ್ಯಕ್ತಿ ಮೋಸಕ್ಕೊಳಗಾಗಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹ್ಯಾಕ್ ಮಾಡಿ ಲಕ್ಷಾಂತರ ರೂ. ಎಗರಿಸಿದ ಘಟನೆ ನಡೆದಿದೆ.

ಸ್ಥಳೀಯ ವ್ಯಕ್ತಿಯೋರ್ವ ‘ವಾಚ್‌ಕ್ಲೂಸ್’ ಹೆಸರಿನ ವೆಬ್‌ಸೈಟ್‌ನಲ್ಲಿ ಮೂರು ವಾಚ್‌ಗಳನ್ನು ಆರ್ಡರ್ ಮಾಡಿದ್ದನು. ಜ.16ರಂದು ಮೂರು ವಾಚ್‌ಗಳು ಡೆಲಿವರಿಯಾಗಿವೆ. ಆದರೆ ಆರ್ಡರ್ ಮಾಡಿದ ವಾಚ್‌ಗಳೇ ಬೇರೆ ಡೆಲಿವರಿ ಆದ ವಾಚ್‌ಗಳೇ ಬೇರೆಯಾಗಿದ್ದವು. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ವೆಬ್‌ಸೈಟ್‌ಗೆ ಸಂಬಂಧಿಸಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದಾನೆ. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿಯು ಹಣವನ್ನು ಹಿಂದಿರುಗಿಸಲು ಸಂತ್ರಸ್ತನ ಬ್ಯಾಂಕ್ ವಿವರ ಕೋರಿದ್ದಾನೆ.

ಅದನ್ನು ನಂಬಿ ಮೋಸಕ್ಕೀಡಾದ ಸಂತ್ರಸ್ತ ತನ್ನ ಬ್ಯಾಂಕ್ ವಿವರ ನೀಡಿದ್ದಾನೆ. ಆ ಕೂಡಲೇ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ. ಹಂತ ಹಂತವಾಗಿ ಡೆಬಿಟ್ ಆಗಿದ್ದು, ಖಾತೆಯನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡಿರುವುದಾಗಿ ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News