ಕೇಂದ್ರ ಸರಕಾರ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ: ಪಿ. ಚಿದಂಬರಂ

Update: 2019-01-18 17:03 GMT

ಹೊಸದಿಲ್ಲಿ, ಜ. 18: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ವಾಯು ಪಡೆಗೆ ಅಗತ್ಯ ಇರುವ 126 ರಫೇಲ್ ಯುದ್ಧ ವಿಮಾನದ ಬದಲು ಕೇವಲ 26 ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ವಾಯು ಪಡೆಗೆ ಅಗತ್ಯ ಇರುವ 126 ರಫೇಲ್ ಯುದ್ಧ ವಿಮಾನದ ಬದಲಿಗೆ 26 ಯುದ್ಧ ವಿಮಾನಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ತೆಗೆದುಕೊಂಡರು ಎಂದು ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮಾಧ್ಯಮದ ಹೊಸ ವರದಿಯ ಹಿನ್ನೆಲೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ವಾಯು ಪಡೆಗೆ ಅಗತ್ಯ ಇರುವ 126 ವಿಮಾನಗಳ ಖರೀದಿಗೆ ನಿರಾಕರಿಸುವ ಮೂಲಕ ಕೇಂದ್ರ ಸರಕಾರ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ. ರಫೇಲ್ ವಿಮಾನಗಳ ವೆಚ್ಚ ಏರಿಕೆಯಾದ ಬಗ್ಗೆ ಮೋದಿ ಅವರು ಉತ್ತರ ನೀಡುವಂತೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಪ್ರಧಾನಿ ಅವರು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಏಕಪಕ್ಷೀಯವಾಗಿ ನಿರ್ಧರಿಸಿದ ಪರಿಣಾಮವಾಗಿ ವಿಮಾನದ ಬೆಲೆ ಶೇ. 41.42 ಏರಿಕೆಯಾಗಿದೆ. ಈ ಪ್ರಶ್ನೆಗೆ ಪ್ರಧಾನಿ ಅವರು ಯಾವಾಗ ಉತ್ತರ ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News