ರಜನಿಕಾಂತ್‌ರನ್ನು ‘ಯಾರು ನೀನು’ ಎಂದು ಕೇಳಿದ್ದ ವಿದ್ಯಾರ್ಥಿ ಬಂಧನ

Update: 2019-01-18 17:12 GMT

ತೂತುಕುಡಿ, ಜ. 18: ಪ್ರತಿಭಟನೆ ಸಂದರ್ಭ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾಗ ಭೇಟಿಯಾಗಲು ಆಗಮಿಸಿದ ಚಿತ್ರನಟ ರಜನಿಕಾಂತ್ ಅವರನ್ನು ‘ನೀನು ಯಾರು ?’’ ಎಂದು ಪ್ರಶ್ನಿಸಿದ ತೂತುಕುಡಿಯ ವಿದ್ಯಾರ್ಥಿ ನಾಯಕ ಕೆ. ಸಂತೋಷ್ ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಲ್ ಕಾಲೇಜ್ ಸ್ಟೂಡೆಂಟ್ಸ್ ಫೆಡರೇಶನ್‌ನ ಅಧ್ಯಕ್ಷನಾಗಿರುವ 22ರ ಹರೆಯದ ವಿದ್ಯಾರ್ಥಿ ಪಂಡಾರಾಂಪಟ್ಟಿ ಗ್ರಾಮದ ನಿವಾಸಿ. ಸ್ಟರ್ಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆಗೆ ಉತ್ತೇಜನ ನೀಡುವ ಕರಪತ್ರಗಳನ್ನು ಹಂಚಿದ ಆರೋಪದಲ್ಲಿ ಸಂತೋಷ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತೋಷ್ ತೂತುಕುಡಿಯಲ್ಲಿ ಕಾಲೇಜೊಂದರಲ್ಲಿ ಬಿ.ಕಾಂ. ಪದವಿ ಪಡೆಯುತ್ತಿದ್ದ. ಆದರೆ, ಎರಡನೇ ವರ್ಷದಲ್ಲಿ ಕಾಲೇಜು ಬಿಟ್ಟಿದ್ದ. ಆದರೆ, ಸ್ಟರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. 2018 ಮೇ 22ರಂದು ತೂತುಕುಡಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಸಂತೋಷ್ ಗಾಯಗೊಂಡಿದ್ದ. ಅನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ನಟ ರಜನಿಕಾಂತ್ ಆಸ್ಪತ್ರೆಗೆ ತೆರಳಿ ಈತನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು. ಈ ಸಂದರ್ಭ ಸಂತೋಷ್ ನಟ ರಜನಿಕಾಂತ್ ಅವರನ್ನು ‘ನೀನು ಯಾರು?’ ಎಂದು ಪ್ರಶ್ನಿಸಿದ್ದ. ಈ ಬಗ್ಗೆ ಕೆಲವರು ಸಂತೋಷ್‌ನನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News