ನಿಗದಿತ ಪ್ರಮಾಣ ಸಂಯೋಜನೆಯ 80ಕ್ಕೂ ಅಧಿಕ ಔಷಧಕ್ಕೆ ಆರೋಗ್ಯ ಸಚಿವಾಲಯ ನಿಷೇಧ

Update: 2019-01-18 17:15 GMT

ಹೊಸದಿಲ್ಲಿ, ಜ. 18: ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಾ ಸೋಂಕು, ಹೈಪರ್‌ಟೆನ್ಸ್‌ನ ಹಾಗೂ ಉದ್ವೇಗಕ್ಕೆ ಚಿಕಿತ್ಸಕವಾಗಿ ಬಳಸುವ ರೋಗ ನಿರೋಧಕ, ನೋವು ನಿವಾರಕ ಹಾಗೂ ಹಲವು ಔಷಧಗಳ ಸಹಿತ ನಿಗದಿತ ಪ್ರಮಾಣದ ಸಂಯೋಜನೆಯ 80 ಔಷಧಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧ ವಿಧಿಸಿದೆ.

ನಿಗದಿತ ಪ್ರಮಾಣ ಸಂಯೋಜನೆಯ ಔಷಧ ಅಥವಾ ಎಫ್‌ಡಿಸಿ ಎರಡು ಅಥವಾ ಹೆಚ್ಚು ಔಷಧಗಳ ಸಂಯೋಜನೆ ಹೊಂದಿದ ಔಷಧ ಹಾಗೂ ಇದನ್ನು ಸರಕಾರದ ಬೆಲೆ ನಿಯಂತ್ರಣ ಆದೇಶದಿಂದ ತಪ್ಪಿಸಿಕೊಳ್ಳಲು ಔಷಧ ಕಂಪೆನಿಗಳು ಮಾರಾಟ ಮಾಡುತ್ತಿವೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅನುಮೋದನೆ ಇಲ್ಲದೆ ಪರವಾನಿಗೆ ಹೊಂದಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2007 ನವೆಂಬರ್‌ನಲ್ಲಿ ನಿಷೇಧಿಸಿದ 294 ಔಷಧಗಳ ಪಟ್ಟಿಯಲ್ಲಿ ಈ 80 ಔಷಧಗಳು ಕೂಡ ಸೇರಿವೆ. ಔಷಧಗಳ ಮೇಲೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಔಷಧ ಉತ್ಪಾದಕರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ತಡೆ ನೀಡಿದ್ದರು. ಅನಂತರ ಔಷಧ ತಾಂತ್ರಿಕ ಸಲಹಾ ಸಮಿತಿ ಮಂಡಳಿಯ ಉಪ ಸಮಿತಿ ಔಷಧದ ಸುರಕ್ಷತೆಯನ್ನು ಪರೀಕ್ಷೆಗೆ ಒಳಪಡಿಸಿತು. 80 ಔಷಧಗಳಲ್ಲಿ ಚಿಕಿತ್ಸಕ ಸಮರ್ಥನೆ ಇಲ್ಲ ಎಂದು ಅದು ತಿಳಿಸಿತ್ತು. ಈ ಸಮಿತಿ ಶಿಫಾರಸಿನ ಮೇಲೆ ಆರೋಗ್ಯ ಸಚಿವಾಲಯ 80 ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಿ ಜನವರಿ 11ರಂದು ಅಧಿಸೂಚನೆ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News