ಯುಎಇ ನೋಟು ತೋರಿಸಿ ವಂಚನೆಗೆ ಯತ್ನ: ಇಬ್ಬರ ಬಂಧನ

Update: 2019-01-18 17:16 GMT

ಮಂಗಳೂರು, ಜ.18: ಯುಎಇ ಕರೆನ್ಸಿಯಾದ ದಿರಮ್ ನೋಟುಗಳನ್ನು ತೋರಿಸಿ ವಂಚನೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಹವ್ರಾ ನಿವಾಸಿಗಳಾದ ಮುಹಮ್ಮದ್ ಸಲೀಂ (33), ನಸ್ರುಲ್ ಇಸ್ಲಾಂ (56) ಬಂಧಿತ ಆರೋಪಿಗಳು.

ಪ್ರಕರಣದ ವಿವರ: ಜ.16ರಂದು ಇಬ್ರಾಹೀಂ ಅಲೀಲ್ ಎಂಬವರಿಗೆ ಯುಎಇ ದಿರಮ್ ನೋಟುಗಳನ್ನು ನೀಡುವುದಾಗಿ ನಂಬಿಸಿ ಆರೋಪಿಗಳು ನಗರದ ರಾಮಕಾಂತಿ ಚಿತ್ರಮಂದಿರ ಬಳಿ ಬರಹೇಳಿದ್ದರು. ನಿಗದಿತ ಸ್ಥಳಕ್ಕಾಗಮಿಸಿದ ಆರೋಪಿಗಳು, ‘ಸುಮಾರು 7 ಲಕ್ಷ ರೂ. ನೋಟುಗಳು ಇವೆ’ ಎಂದು ಹಳೇ ದಿನ ಪತ್ರಿಕೆಗಳ ಬಂಡಲ್‌ಗಳಿಗೆ ಮೇಲ್ಭಾಗದಲ್ಲಿ ಏಳು ದಿರಮ್ ನೋಟುಗಳನ್ನು ಸುತ್ತಿ ತೋರಿಸಿ ವಂಚಿಸಲು ಮುಂದಾಗಿದ್ದರು. ಈ ವೇಳೆ ಇಬ್ರಾಹೀಂ ಖಲೀಲ್ ಸಂಶಯಗೊಂಡು ವಿಚಾರಿಸಿದಾಗ, ಆರೋಪಿಗಳು ಸ್ಥಳದಿಂದ ಸೊತ್ತು ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸುರೇಶ್ ಕುಮಾರ್ ಪಿ. ಮತ್ತು ಪಿಎಸ್ಸೈ ಪ್ರದೀಪ ಟಿ.ಆರ್. ಹಾಗೂ ಸಿಬ್ಬಂದಿ ರಮೇಶ, ಮಹಾದೇವ ಮತ್ತು ತಿಪ್ಪಾರೆಡ್ಡಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News