ಬಾಲಮಂದಿರದಿಂದ ಬಾಲಕ ಪರಾರಿ

Update: 2019-01-18 17:17 GMT

ಮಂಗಳೂರು, ಜ.18: ನಗರದ ಬಾಲಮಂದಿರದಿಂದ ಜ.11ರಂದು ಬಾಲಕನೋರ್ವ ತಪ್ಪಿಸಿಕೊಂಡು ಹೋದ ಬಗ್ಗೆ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕಾಶ್ (17) ತಪ್ಪಿಸಿಕೊಂಡು ಹೋಗಿರುವ ಬಾಲಕ.

ಚಹರೆ: 168 ಸೆಂ.ಮೀ. ಎತ್ತರವಿದ್ದು, ಕಪ್ಪು ಕೂದಲು, ಗಾಢ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ಹಿಂದಿ, ಕನ್ನಡ, ತಮೀಲು ಮಾತನಾಡುತ್ತಾನೆ. ಬಾಲಕನ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ ಕಾವೂರು ಪೊಲೀಸ್ ಠಾಣೆ (0824- 2220533) ಗೆ ತಿಳಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News