‘ರಾಜ್ಯದಲ್ಲಿ ಏಕರೂಪದ ಶಿಕ್ಷಣ ನೀತಿ ಜಾರಿಗೊಳಿಸಿ’ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಕೋಟ ಒತ್ತಾಯ

Update: 2019-01-18 17:20 GMT

 ಉಡುಪಿ, ಜ.18: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎಂಬ ಬಗ್ಗೆ ಈಗ ಮತ್ತೆ ಚರ್ಚೆಗಳು ನಡೆಯುತಿದ್ದು, ಸರಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ನಡುವಿನ ಕಂದಕವನ್ನು ಕಡಿಮೆ ಮಾಡಲು ರಾಜ್ಯಾದ್ಯಂತ ಏಕರೂಪದ ಶಿಕ್ಷಣ ನೀತಿ ಜಾರಿಗೊಳಿಸುವುದೊಂದೇ ಮಾರ್ಗ ಎಂದು ವಿಧಾನಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ತಾಲೂಕು ಘಟಕದ ವತಿಯಿಂದ ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ಶುಕ್ರವಾರ ನಡೆದ 12ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯದ ಸುಮಾರು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವ ರಾಜ್ಯ ಸರಕಾರದ ನಿರ್ಧಾರದ ಬಗ್ಗೆ ಚರ್ಚೆಯಾಗಬೇಕು. ಆಂಗ್ಲ ಮಾಧ್ಯಮವನ್ನು ವಿರೋಧಿಸಿದರೆ ಬಡವರ ಮಕ್ಕಳ ಬಗ್ಗೆ ತಾರತಮ್ಯ ಎಂಬ ಭಾವನೆ ಉದ್ಭವಿಸುತ್ತಿದೆ. ಹೀಗಾಗಿ ಮಾತೃಭಾಷೆ ಬೆಳವಣಿಗೆ ದೃಷ್ಟಿಯಲ್ಲಿ ಏಕರೂಪದ ಶಾಲೆಗೆ ಒತ್ತಾಯ ಹಾಗೂ ಏಕರೂಪದ ಶಿಕ್ಷಣ ನೀತಿ ಜಾರಿಯಾಗಬೇಕು. ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ರಾಜ್ಯದಲ್ಲಿ 48 ಸಾವಿರ ಸರಕಾರಿ ಹಾಗೂ 2 ಸಾವಿರ ಅನುದಾನಿತ ಸೇರಿ 50 ಸಾವಿರದಷ್ಟು ಕನ್ನಡ ಮಾಧ್ಯಮ ಶಾಲೆಗಳಿವೆ. ಸುಮಾರು 1 ಕೋಟಿ ಮಕ್ಕಳು ಇದರಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 2.5 ಲಕ್ಷ ಮಂದಿ ಶಿಕ್ಷಕರಿದ್ದಾರೆ. 1.5 ಲಕ್ಷ ಬಿಸಿಯೂಟದ ಸಿಬ್ಬಂದಿಗಳಿದ್ದಾರೆ. ಬಜೆಟ್‌ನಲ್ಲಿ ಶೇ.18-19ರಷ್ಟು (ಸುಮಾರು 20,000ಕೋಟಿರೂ.) ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದರು.

ಇಷ್ಟಾದರೂ ರಾಜ್ಯದ 15,000 ಶಾಲೆಗಳಲ್ಲಿ ಶೌಚಾಲಯವೂ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ. 7 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಎಲ್ಲರೂ ಒಪ್ಪುವಂತ ತೀರ್ಮಾನವನ್ನು ಸರಕಾರ ಕೈಗೊಳ್ಳಬೇಕಾಗಿದೆ. ಆದರೆ ಈ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಾದ ವಿಧಾನ ಮಂಡಲದಲ್ಲೇ ಭಾಷಾಜ್ಞಾನಿಗಳ ಕೊರತೆ ಕಾಡುತ್ತಿದೆ ಎಂದವರು ಕಳವಳ ವ್ಯಕ್ತ ಪಡಿಸಿದರು.

ಖ್ಯಾತ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ.ಗಣನಾಥ ಎಕ್ಕಾರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ನಿಕೇತನ ಅವರು ‘ಬೊಗಸೆಯೊಳಗೆ ಸಾಗರ’ ಹಾಗೂ ಸಚ್ಚಿದಾನಂದ ಅವರ ‘ತುಳುವರ ನಾಡುನುಡಿ’ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಖ್ಯಾತ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ.ಗಣನಾಥ ಎಕ್ಕಾರು ಸಮ್ಮೇಳನ್ಯಾಕ್ಷತೆಯನ್ನುವಹಿಸಿದ್ದರು.ಇದೇಸಂದರ್ದಲ್ಲಿ ಡಾ.ನಿಕೇತನ ಅವರು ‘ಬೊಗಸೆಯೊಳಗೆ ಸಾಗರ’ ಹಾಗೂ ಸಚ್ಚಿದಾನಂದ ಅವರ ‘ತುಳುವರ ನಾಡುನುಡಿ’ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕಸಾಪ ಉಡುಪಿ ತಾಲೂಕು ಘಟಕದ ವತಿಯಿಂದ ಪ್ರಾರಂಭಿಸಲಾದ ಪುಸ್ತಕ ದಾನಅಭಿಯಾನಕ್ಕೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಪೇಂದ್ರ ಸೋಮಯಾಜಿ ಚಾಲನೆ ನೀಡಿದರು.

ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ರಶ್ಮಿ ಚಿತ್ತರಂಜನ್ ಭಟ್, ಲಯನ್ಸ್ ಭವನದ ಅಧ್ಯಕ್ಷ ರಾಜಗೋಪಾಲ್ ಎಸ್., ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಾ.ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಶೆಟ್ಟಿ, ವೆಲೇರಿಯನ್ ಮೆನೇಜಸ್, ಸೂರಾಲು ನಾರಾಯಣ ಮಡಿ, ಮುರಳೀಧರ ಕೆ., ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯದ ನುಡಿಗಳನ್ನಾಡಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿ ಗಿರಿಜಾ ಹೆಗ್ಡೆ ಗಾಂವ್ಕರ್ ವಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ತಾಲೂಕು ಘಟಕದ ಅ್ಯಕ್ಷೆವಸಂತಿಶೆಟ್ಟಿಬ್ರಹ್ಮಾವರಸ್ವಾಗತಿಸಿದರು.ಜಿಲ್ಲಾಕನ್ನಡಸಾಹಿತ್ಯಪರಿಷತ್‌ಅ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯದ ನುಡಿಗಳನ್ನಾಡಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿ ಗಿರಿಜಾ ಹೆಗ್ಡೆ ಗಾಂವ್ಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News