ನಿಟ್ಟೆ ವಿ.ವಿ ವಾಕ್ ಶ್ರವಣ ವಿಭಾಗ ನೂತನ ಕಟ್ಟಡದಲ್ಲಿ ಉದ್ಘಾಟನೆ

Update: 2019-01-18 17:22 GMT

ಉಳ್ಳಾಲ, ಜ. 18: ಫಿಸಿಯೋಥೆಪರಪಿ ಮತ್ತು ವಾಕ್ ಶ್ರವಣ ವಿಭಾಗ  ಆಸ್ಪತ್ರೆಯಲ್ಲಿ ಕಾರ್ಯಾಚರಿಸುವ ಪ್ರಮುಖ ವಿಭಾಗಗಳಾಗಿವೆ. ಪರಿಣಾಮಕಾರಿಯಾದ ತರಬೇತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಾಕ್ ಶ್ರವಣ ವಿಭಾಗ ಕಳೆದ ಮೂರು ವರ್ಷಗಳಿಂದ ಒಂದನೇ ರ್ಯಾಂಕ್ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ  ಸ್ನಾತಕೋತ್ತರ ವಿಭಾಗವೂ ಕಾರ್ಯಾಚರಿಸುವ ಕುರಿತು ಚಿಂತನೆ ನಡೆಸಲಾಗಿದೆ  ಎಂದು ನಿಟ್ಟೆ ಸ್ವಾಯುತ್ತೆ ಆಗಲಿರುವ ವಿ.ವಿ ಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಹೇಳಿದರು.

ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯ ಇದರ ವಾಕ್ ಶ್ರವಣ ವಿಭಾಗದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ವಿಭಾಗವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಸಹಕುಲಾಧಿಪತಿಗಳಾದ ಡಾ. ಎಂ.ಶಾಂತರಾಮ ಶೆಟ್ಟಿ, ವಿಶಾಲ್ ಹೆಗ್ಡೆ, ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಡಾ.ಎಂ ಎಸ್ ಮೂಡಿತ್ತಾಯ, ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ನಿಟ್ಟೆ ವಾಕ್ ಶ್ರವಣ ಕಾಲೇಜಿನ ನಿರ್ದೇಶಕ ದತ್ತಾತ್ರೇಯ, ಪ್ರಾಂಶುಪಾಲೆ ಶ್ವೇತಾ, ಕ್ಷೇಮ ಡೀನ್ ಡಾ. ಪಿ.ಯಸ್ ಪ್ರಕಾಶ್, ದಂತ ಕಾಲೇಜಿನ ಡೀನ್ ಡಾ. ಯು.ಯಸ್ ಕೃಷ್ಣ ನಾಯಕ್, ಸಹಡೀನ್ ಗಳಾದ ಡಾ. ಜಯಪ್ರಕಾಶ್ ಶೆಟ್ಟಿ, ಅಮೃತ್ ಮಿರಾಜ್ ಕರ್, ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ   ಸಂಚಾಲಕಿ ಡಾ. ಸುಮಲತಾ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹಿರೇಮಠ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News