ರಶ್ಯ: ಯುದ್ಧವಿಮಾನಗಳು ಆಕಾಶದಲ್ಲಿ ಢಿಕ್ಕಿ

Update: 2019-01-18 17:22 GMT

ಮಾಸ್ಕೋ, ಜ. 18: ರಶ್ಯದ ಎರಡು ಯುದ್ಧವಿಮಾನಗಳು ಆಕಾಶದಲ್ಲಿ ಢಿಕ್ಕಿಯಾಗಿವೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಎರಡು ಎಸ್‌ಯು-34 ಯುದ್ಧವಿಮಾನಗಳು ತರಬೇತಿ ಹಾರಾಟ ನಡೆಸುತ್ತಿದ್ದಾಗ ಜಪಾನ್ ಸಮುದ್ರದ ದಂಡೆಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪರಸ್ಪರ ಢಿಕ್ಕಿಯಾದವು ಎಂದು ರಶ್ಯ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಎರಡೂ ವಿಮಾನಗಳ ಪೈಲಟ್‌ಗಳು ವಿಮಾನಗಳಿಂದ ಸುರಕ್ಷಿತವಾಗಿ ಹೊರಹಾರಿದ್ದಾರೆ. ಓರ್ವ ಪೈಲಟ್‌ನನ್ನು ಸಮುದ್ರದಲ್ಲಿ ದೋಣಿಯೊಂದರಲ್ಲಿ ಅವರು ತುರ್ತು ಬೆಳಕನ್ನು ಹಾಯಿಸುತ್ತಿರುವಾಗ ಪತ್ತೆಹಚ್ಚಲಾಗಿದೆ.

ಇತರ ಪೈಲಟ್‌ಗಳು ಎಲ್ಲಿದ್ದಾರೆ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿಗಳು ಬಂದಿಲ್ಲ.

ಅಪಘಾತ ನಡೆಯುವಾಗ ವಿಮಾನಗಳಲ್ಲಿ ಕ್ಷಿಪಣಿಗಳಿರಲಿಲ್ಲ ಎಂದು ರಶ್ಯ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News