ಪ್ರವಾದಿ ನಿಂದನೆ: ಉಳ್ಳಾಲ ಮುಸ್ಲಿಂ ಜಮಾಅತ್ ವತಿಯಿಂದ ಪ್ರತಿಭಟನೆ

Update: 2019-01-18 17:41 GMT

ಉಳ್ಳಾಲ, ಜ. 18: ಪ್ರವಾದಿ ಅವರು ಶಾಂತಿಯನ್ನು ಸಾರಿದವರು. ಆದರೆ ಅವರನ್ನು ನಿಂದಿಸುವ ಮೂಲಕ ಟಿವಿ ನಿರೂಪಕರು ಜೀತ ಪದ್ಧತಿಯನ್ನು ತೋರಿದ್ದಾರೆ ಎಂದು ದರ್ಗಾ ಅಧ್ಯಕ್ಷ ರಶೀದ್ ಹಾಜಿ ಹೇಳಿದರು.

ಅವರು ಉಳ್ಳಾಲ ಮುಸ್ಲಿಂ ಜಮಾಅತ್ ವತಿಯಿಂದ ಉಳ್ಳಾಲ ಹಝ್ರತ್ ಶಾಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರವಾದಿಯವರು ಸಹನೆಯನ್ನು ಬಯಸಿದವರು. ನಿಂದನೆ ಅವರಿಗಿಷ್ಟವಿಲ್ಲ. ಪ್ರವಾದಿಯವರನ್ನು ನಿಂದಿಸಿದ ಅಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆದು ನಮಗೆ ಸಾಕಾಗುವುದಿಲ್ಲ. ಪರಧರ್ಮವನ್ನು ಟೀಕಿಸುವುದನ್ನು ಇಸ್ಲಾಂ ಮಾತ್ರವಲ್ಲ  ಸಮಾಜ ಕೂಡಾ ವಿರೋಧಿ ಸುತ್ತದೆ ಎಂದರು.

ಎಸ್ ಬಿ ದಾರಿಮಿ ಮಾತನಾಡಿ, ಅಜಿತ್‍ನನ್ನು ಬಂಧಿಸಿದರೆ ರಾಜಕೀಯದವರಿಗೆ ಜಯ ಸಿಗುತ್ತದೆ. ಈಗ ನಡೆಯುತ್ತಿರುವುದು ಅಜಿತ್ ಅವರ ವಿರುದ್ಧ ಹೋರಾಟ ವಲ್ಲ, ಅವರ ಸಿದ್ಧಾಂತದ ವಿರುದ್ಧ ಹೋರಾಟವಾಗಿದೆ. ಭಾರತೀಯ ಮುಸ್ಲಿಮರು ರಾಜಕೀಯ ಇಚ್ಛಾ ಶಕ್ತಿ ಹೊಂದಿದ್ದಾರೆ. ಬಾಂಗ್ ನಲ್ಲಿ ಪ್ರವಾದಿ ಯವರ ಹೆಸರು ಬಳಕೆ ಮಾಡಲಾಗುತ್ತದೆ. ಸರ್ಕಾರಕ್ಕೆ ತಾಕತ್ತಿದ್ದರೆ ಮೊದಲು ಸಂವಿಧಾನ ರಕ್ಷಣೆ ಮಾಡಲಿ. ಅಧಿಕಾರ ಶಾಶ್ವತ ಅಲ್ಲ. ನ್ಯಾಯ ಕೊಡುವ ಕೆಲಸ ಪ್ರಮಾಣ ವಚನ ಸ್ವೀಕರಿಸಿದವರು ಮಾಡಲಿ ಎಂದರು.

ಯುನಿವೆಫ್ ಅಧ್ಯಕ್ಷ ರಪೀಯುದ್ದೀನ್ ಕುದ್ರೋಳಿ ಮಾತನಾಡಿ, ಉಳ್ಳಾಲ ದಲ್ಲಿ ಧರ್ಮ ಜಾಗೃತಿಯಾದರೆ ಧರ್ಮದ ದಿಕ್ಕನ್ನೆ ಬದಲಾಯಿಸುತ್ತದೆ. ರಾಜಕೀಯ ದಲ್ಲಿ ಶಾಸಕ, ಸಂಸದ ಆಗಬೇಕಾದರೆ ಸುಲಭವಾಗಿ ಮುಸ್ಲಿಮರನ್ನು ಟೀಕಿಸುತ್ತಾರೆ. ಕೆಲವು ದೃಶ್ಯ ಮಾಧ್ಯಮಗಳು ಕೇಸರಿ ಮಯವಾಗಿ ಟೀಕೆ ಮಾಡುವ ಕಾರ್ಯ ನಡೆಸುತ್ತದೆ. ಹಿಂದೂ ಧರ್ಮದವರು ನಂಬಿಕೊಂಡಿರುವ  ಮಹಾಭಾರತ ಮತ್ತು ರಾಮಾಯಣ ವನ್ನು ಭಾಷಾಂತರ ಮಾಡಿದ್ದು ಮುಸ್ಲಿಮರಾಗಿದ್ದಾರೆ. ಜಹಾಂಗೀರ್ ನ ಆಡಳಿತ ಕಾಲದಲ್ಲಿ ಭಾಷಾಂತರ ಮಾಡಲಾಗಿದೆ. ಪ್ರವಾದಿಯವರುವ ಅವರಿಗೆ  ಕಲ್ಲೆಸದ ಕುತ್ತಿಗೆಗೆ ಹಗ್ಗ ಬಿಗಿದ ಶತ್ರು ಗಳಿಗೂ ಕ್ಷಮೆ ನೀಡಿದ್ದರು. ಟೀಕೆ, ನಿಂದನೆ ಮಾಡುವ  ಮೊದಲು ಅವರ ಚರಿತ್ರೆ ಓದಬೇಕು. ದೇಶದಲ್ಲಿ ಬದುಕುವ ಮಹಿಳೆಯರಿಗೆ ಆಸ್ತಿ ಹಕ್ಕಿದೆ ಎಂದು ಘೋಷಣೆ ಮಾಡಿದ್ದು ಪ್ರವಾದಿ ಯಾಗಿದ್ದಾರೆ. ಈ ದೇಶ ಕೆಲವರಿಗೆ ಮಾತ್ರ ಸೀಮಿತ ಆಗಬಾರದು. ನಾವು ಪ್ರೀತಿಸುವ ಪ್ರವಾದಿಯವರನ್ನು ನಿಂದಿಸಿದ ಅಜಿತ್ ಹನುಮಕ್ಕರವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಇಮಾಂ ಕೌನ್ಸಿಲ್ ರಾಜ್ಯಾಧ್ಯಕ್ಷ ಜಾಫರ್ ಸಾದಿಕ್ ಫೈಝಿ ಮಾತನಾಡಿ ಅಜಿತ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಕೂಡಾ ಸರಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿದ ಅವರು ಸರ್ಕಾರ ದ ಬೇಜವಾಬ್ದಾರಿ ನೀತಿಯಿಂದ ಮುಸ್ಲಿಮರು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಅನಸ್ ತಂಙಳ್  ದುವಾ ನೆರವೇರಿಸಿದರು. ಫಾರೂಕ್ ಉಳ್ಳಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News