ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

Update: 2019-01-19 16:01 GMT

ಹೊಸದಿಲ್ಲಿ,ಜ.19: ಶನಿವಾರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ 17 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ 19 ಪೈಸೆ ತುಟ್ಟಿಯಾಗಿದೆ. ಹೊಸದಿಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 70.72ರೂ.ಗೆ ಮಾರಾಟವಾಗುತ್ತಿದ್ದರೆ ಡೀಸೆಲ್ 65.16ರೂ.ಗೆ ಮಾರಾಟವಾಗುತ್ತಿದೆ. ಇದೇ ವೇಳೆ ಮುಂಬೈಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 76.35ರೂ. ಮತ್ತು 68.22ರೂ. ತಲುಪಿದೆ.

ಮುಂದಿನ ದಿನಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಉಂಟಾಗಿರುವ ಏರಿಕೆಯ ಪರಿಣಾಮವಾಗಿ ತೈಲ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News