ಯುವತಿಯ ಚಿನ್ನದ ಸರ ಲೂಟಿ: ದೂರು

Update: 2019-01-20 18:00 GMT

ಮಂಗಳೂರು, ಜ.20: ಯುವತಿಯ ಕುತ್ತಿಗೆಯಿಂದ ಸಾವಿರಾರು ರೂ. ಮೌಲ್ಯದ ಚಿನ್ನದ ಸರ ಎಳೆದೊಯ್ದ ಘಟನೆ ನಗರದ ಉರ್ವಸ್ಟೋರ್ ಬಳಿ ರವಿವಾರ ಬೆಳಗ್ಗೆ ನಡೆದಿದೆ.

ಸ್ಥಳೀಯ ನಿವಾಸಿ ದೀಪ್ತಿ ಎಂಬವರು ಚಿನ್ನದ ಸರ ಕಳೆದುಕೊಂಡವರು. 24 ಸಾವಿರ ರೂ. ಮೌಲ್ಯದ 12 ಗ್ರಾಂ ಚಿನ್ನದ ಸರವನ್ನು ಲೂಟಿಕೋರರು ಎಳೆದೊಯ್ದಿದ್ದಾರೆ.

ಜ.16ರಂದು ರಾತ್ರಿ ಗೆಳತಿ ಸ್ವಪ್ನಿಲ್ ಎಂಬಾಕೆಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಉರ್ವಸ್ಟೋರ್‌ನ ಪಿ.ಜಿ.ಗೆ ಬಿಟ್ಟು ಹಿಂದಿರುಗಿ ಉರ್ವಸ್ಟೋರಿನ  ದಡ್ಡಲ್‌ಕಾಡ್ ರಸ್ತೆ ಕಡೆಗೆ ಹೋಗುತ್ತಿದ್ದು, ರಸ್ತೆ ಇಳಿಜಾರು ಬಳಿ ರಾತ್ರಿ 10:20ಕ್ಕೆ ತಲುಪಿದಾಗ ಎದುರುಗಡೆಯಿಂದ 2 ಬೈಕ್‌ಗಳಲ್ಲಿ ತಲಾ ಇಬ್ಬರಂತೆ ಬಂದಿದ್ದು, ಅವರ ಬೈಕಿನ ಬೆಳಕು ದೀಪ್ತಿ ಅವರ ಮುಖದ ಮೇಲೆ ಬಿದ್ದಾಗ ತನ್ನ ವಾಹನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ಬೈಕ್‌ನ ಹಿಂಬದಿ ಸವಾರ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಬಲತ್ಕಾರವಾಗಿ ಕಸಿದುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News