ಸದ್ಭಾವನಾ ವೇದಿಕೆ ಜಪ್ಪು ವರ್ತುಲದಿಂದ ಕ್ರಿಸ್ಮಸ್ ಸೌಹಾರ್ದ ಕೂಟ

Update: 2019-01-20 18:03 GMT

ಮಂಗಳೂರು, ಜ.20: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ವತಿಯಿಂದ ಮೊರ್ಗನ್ಸ್‌ಗೇಟ್‌ನ ಕಾಸಿಯಾ ಚರ್ಚ್ ಹಾಲ್‌ನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ ನಡೆಯಿತು.

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿದ್ದ ಸೈಂಟ್ ಜೋಸೆಫ್ ಸೆಮಿನರಿಯ ಪ್ರೊ.ವಂ.ಪ್ರವೀಣ್ ಲಿಯೋ ಲಸ್ರಾದೊ ಮಾತನಾಡಿ, ಸರ್ವ ಧರ್ಮದವರ ಜೊತೆ ಸೇರಿ ಕ್ರಿಸ್ಮಸ್ ಆಚರಿಸುವುದರಲ್ಲಿ ನಿಜವಾದ ಅರ್ಥವಿದೆ. ಸಮಾಜಘಾತುಕರಿಗೆ ಬೆಂಬಲ ನೀಡಿದರೆ ಅದರಿಂದ ನಮಗೆ ಅಪಾಯ. ಎಲ್ಲರ ಸಮಸ್ಯೆ ನಮ್ಮ ಸಮಸ್ಯೆ ಎಂದು ಭಾವಿಸಿದಾಗ ಬದುಕಿನಲ್ಲಿ ಸಹೋದರ ಭಾವನೆಯೊಂದಿಗೆ ಬದುಕಬಹುದು ಎಂದು ಶುಭ ಹಾರೈಸಿದರು.

ಪಣಂಬೂರು ರೆಡ್ ಕ್ರಾಸ್ ಕ್ಲೀನಿಕ್‌ನ ಮೆಡಿಕಲ್ ಆಫೀಸರ್ ಡಾ.ಜೆ.ಎನ್.ಭಟ್ ಮಾತನಾಡಿ, ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವ ಮೂಲಕ ದೇವರನ್ನು ಕಾಣಲು ಸಾಧ್ಯ ಎಂದು ಶುಭ ಹಾರೈಸಿದರು.

ಮಂಗಳೂರು ಫಾರ್ವಡ್ ಕೌನ್ಸಿಲ್ ಸೆಂಟರ್‌ನ ಸಲಹೆಗಾರ ಸಈದ್ ಇಸ್ಮಾಯೀಲ್ ಮಾತನಾಡಿ, ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮ. ಸಮಾಜದಲ್ಲಿ ಸದ್ಭಾವನೆ ಇದ್ದಾಗ ಸಂಘರ್ಷ ಕೊನೆಯಾಗುತ್ತದೆ. ಸ್ನೇಹ ಧರ್ಮದ ತಿರುಳು ಎಂದು ಶುಭ ಹಾರೈಸಿದರು.

ಸದ್ಭಾವನಾ ವೇದಿಕೆಯ ಅಧ್ಯಕ್ಷ ಎಂ.ವಿ.ಸುರೇಶ್ ಅಧ್ಯಕ್ಷ ತೆ ವಹಿಸಿದ್ದರು.  ಸಮಾರಂಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ, ಮುಹಮ್ಮದ್ ಹನೀಫ್, ಅರುಣ್ ಕುಮಾರ್, ಕೇಶವ ಭಟ್, ಸುಧಾಮಣಿ, ಎಂ.ಐ. ಖಲೀಲ್, ರಂಜನ್ ಕೆ.ಎಸ್. ಮೊದಲಾದವರು ಉಪಸ್ಥಿತರಿದ್ದರು.

ಜೇಸನ್ ಪೀಟರ್ ಡಿಸೋಜ ಮತ್ತು ಬಳಗದವರಿಂದ ಕ್ರಿಸ್ಮಸ್ ಸಂದೇಶ ನೀಡಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News