ಕಾರ್ಕಳ: ದಾರುಲ್ ಉಲೂಮ್ ಅಲ್ ಮಆರಿಫ್‌ದ ಪದವಿ ಪ್ರದಾನ ಸಮಾರಂಭ

Update: 2019-01-21 07:26 GMT

ಕಾರ್ಕಳ, ಜ.21: ಇಲ್ಲಿನ ದಾರುಲ್ ಉಲೂಮ್ ಅಲ್ ವಆರಿಫ್ ಇದರ ಎರಡನೇ ಪದವಿ ಪ್ರದಾನ ಸಮ್ಮೇಳನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಸರಾಂತ ವಿದ್ವಾಂಸ ಹಝ್ರತ್ ಮೌಲಾನಾ ಸೈಯದ್ ಮುಹಮ್ಮದ್ ತಲಹಾ ಸಾಹೇಬ್ ಅಲ್ ಕಾಸಿಮಿ ಈ ಬಾರಿ ಕುರ್‌ಆನ್ ಕಂಠಪಾಠ ಮಾಡಿ ಉತ್ತಿರ್ಣಗೊಂಡ ದಾರುಲ್ ಉಲೂಮ್ ಅಲ್ ಮಆರಿಫ್ ಇದರ 24 ಮಕ್ಕಳಿಗೆ ಪದವಿ ಪ್ರದಾನ ಮಾಡಿದರು.
 
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುನಾಝಿರೆ ಇಸ್ಲಾಮ್ ಹಝ್ರತ್ ಮೌಲಾನಾ ಮುಫ್ತಿ ಮಅಸೂಮ್ ಶಾಕಿಬ್ ಅಲ್ ಕಾಸಿಮಿ, ಪ್ರತಿಯೊಬ್ಬರೂ ತನ್ನನ್ನು ಮದ್ರಸದ ಓರ್ವ ವಿದ್ಯಾರ್ಥಿ ಎಂದು ತಿಳಿಯಬೇಕು, ಅಲ್ಲಾಹನು ಈ ಸಮುದಾಯದ ಲೌಕಿಕತೆಯನ್ನು ಪವಿತ್ರ ಇಸ್ಲಾಮ್ ಧರ್ಮದ ಮೇಲೇ ಅವಲಂಬಿಸಿದ್ದಾನೆ. ಇವತ್ತು ಸಮುದಾಯಕ್ಕೆ ಮಾರ್ಗದರ್ಶನ ನೀಡುವಂತಹ ಉಲಮಾಗಳ ಅಗತ್ಯವಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಹಝ್ರತ್ ಮೌಲಾನಾ ಕಲೀಮುಲ್ಲಾ ಸಾಹೇಬ್ ಅಲ್ ಕಾಸಿಮಿ ಮಾತನಾಡಿ ಶುಭ ಹಾರೈಸಿದರು.

 ವೇದಿಕೆಯಲ್ಲಿ ಕಾರ್ಕಳ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಪ್ರಾಂಶುಪಾಲ ಮುಫ್ತಿ ಅಬ್ದುಲ್ ರಹಿಮಾನ್ ಅಲ್ ಕಾಸಿಮಿ, ಟ್ರಸ್ಟಿ ಮುಶ್ತಾಕ್ ಅಹ್ಮದ್, ಕಾರ್ಯದರ್ಶಿ ಸೈಯದ್ ಯೂನುಸ್, ಮಸೀದಿಯ ಇಮಾಮ್ ಮೌಲಾನಾ ಶಮ, ಡಾಕ್ಟರ್ ರಿಝ್ವಾನ್ ಅಹ್ಮದ್, ಹಾಫಿಝ್ ಇಬ್ರಾಹೀಂ ಉಪಸ್ಥಿತರಿದ್ದರು. ಮೌಲಾನಾ ಸೈಯ್ಯದ್ ಮುಹಮ್ಮದ್ ತಲಹಾ ದುಆಗೈದರು.

ಮುಫ್ತಿ ಅರ್ಶದ್ ಅಲ್ ಕಾಸಿಮಿ ಕಾರ್ಯಕ್ರಮ ನಿರೂಪಿಸಿದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿ ಸ್ವಾಗತ ಭಾಷಣ ಮಾಡಿದರು. ಮುಫ್ತಿ ರಿಯಾಝ್ ಕಿರಾಅತ್ ಪಠಿಸಿದರು. ಮುಫ್ತಿ ಇಮ್ದಾದುಲ್ಲಾ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News