​ಜ. 24ರಿಂದ ಕೆಎಂಸಿ ಅತ್ತಾವರದಲ್ಲಿ ಕಾರ್ಯಾಗಾರ

Update: 2019-01-21 14:10 GMT

ಮಂಗಳೂರು, ಜ. 21: ಇಲ್ಲಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜ. 24 ಮತ್ತು 25ರಂದು ‘ಹಿರಿಯರಲ್ಲಿ ವಿಶಿಷ್ಟ ಆರೈಕೆ ಸೇವೆ’ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಕಾರ್ಯಾಗಾರದಲ್ಲಿ ಖ್ಯಾತ ವೈದ್ಯರುಗಳು, ಸಾಮಾಜಿಕ ಕಾರ್ಯಕರ್ತರು, ಫಿಸಿಯೋಥೆರಪಿಸ್ಟ್‌ಘಿ, ಜರಾರೋಗ್ಯ ಶಾಸ ನಿಪುಣರು, ಶುಶ್ರೂಷಕ ಶುಶ್ರೂಕಿಯರು ಪಾಲ್ಗೊಳ್ಳಲಿದ್ದಾರೆ. ಹಿರಿಯರ ಆರೈಕೆಯ ಮಾಹಿತಿಗಳು ಇಲ್ಲಿ ಸಮಗ್ರವಾಗಿ ದೊರೆಯಲಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಆನಂದ ವೇಣುಗೋಪಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಎಂಸಿ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಜಾನ್ ರಾಮಪುರಂ ಮಾತನಾಡಿ, ಪ್ರಸ್ತುತ ಭಾರತದಲ್ಲಿ ವಯೋವೃದ್ಧರ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ.8.06ರಷ್ಟಿದೆ. ಅಂದರೆ ದೇಶದಲ್ಲಿ 10.4ಕೋಟಿಯಷ್ಟು ವಯೋವೃದ್ಧರಿದ್ದಾರೆ. ಮುಂದಿನ 30 ವರ್ಷಗಳಲ್ಲಿ ಇದು ಶೇ.20ರಷ್ಟು ಅಂದರೆ 30 ಕೋಟಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಯೋವೃದ್ಧರ ಆರೈಕೆಯೂ ಬಹುಮುಖ್ಯವಾದ ವಿಚಾರ. ಈ ಹಿನ್ನೆಲೆಯಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೀರಿಯಾಟ್ರಿಕ್ಸ್ ವಿಭಾಗದ ಡಾ.ಶೀತಲ್‌ರಾಜ್, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ವಿಭಾಗದ ರಾಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News