ದೇರಳಕಟ್ಟೆ: ಮಿತ್ತಬೈಲ್ ಉಸ್ತಾದ್ ಅನುಸ್ಮರಣಾ ಸಂಗಮ

Update: 2019-01-21 14:21 GMT

ಉಳ್ಳಾಲ, ಜ.21: ಎಸ್ಕೆಎಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ ಗ್ರೀನ್ ಗ್ರೌಂಡ್ ಮದ್ರಸ ವಠಾರದಲ್ಲಿ ಸಂಶುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಮಿತ್ತಬೈಲ್ ಉಸ್ತಾದರ ಅನುಸ್ಮರಣಾ ಸಂಗಮ ಶನಿವಾರ ನಡೆಯಿತು.

ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್‌ನ ಮುದರ್ರಿಸ್ ಶರೀಫ್ ಅರ್ಶದಿ ಉದ್ಘಾಟಿಸಿದರು. ಸೈಯದ್ ಅಮೀರ್ ತಂಙಳ್ ಮೌಲಿದ್ ಮಜ್ಲಿಸ್ ಹಾಗೂ ತಹ್ಲೀಲ್ ಮತ್ತು ದುಆ ಮಜ್ಲಿಸ್‌ಗೆ ಸೈಯದ್ ಹಾರಿಸಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವ ವಹಿಸಿದರು.

ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ, ಮಿತ್ತಬೈಲ್ ಉಸ್ತಾದರ ಪುತ್ರ ಇರ್ಷಾದ್ ದಾರಿಮಿ. ಹಾಫಿಲ್ ಝೈನ್ ಸಖಾಫಿ. ಅನುಸ್ಮರಣಾ ಪ್ರಭಾಷಣ ನಡೆಸಿದರು. ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣಗೈದರು.

ಕಾರ್ಯಕ್ರಮದಲ್ಲಿ ದೇರಳಕಟ್ಟೆ ಮದ್ರಸ ಮ್ಯಾನೇಜ್ಮೆಂಟ್‌ಅಧ್ಯಕ್ಷ ಡಿ.ಇಸ್ಮಾಯೀಲ್ ಹಾಜಿ, ದೇರಳಕಟ್ಟೆ ಎಜುಕೇಷನಲ್ ಚಾರೀಟೇಬಲ್ ಟ್ರಸ್ಟ್ನ ಅಧ್ಯಕ್ಷ ಅಬೂಬಕರ್ ಹಾಜಿ, ಉಳ್ಳಾಲ ಸೈಯದ್‌ಮದನಿ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮದ್ರಸ ಮ್ಯಾನೇಜ್ಮೆಂಟ್ ಗೌರವಾಧ್ಯಕ್ಷ ಹಾಜಿ ಅಬ್ಬಾಸ್ ಮಜಲ್, ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬ್ಬಾಸ್ ಹಾಜಿ, ಮನಾರುಲ್ ಹುದಾ ಮದ್ರಸದ ಅಧ್ಯಕ್ಷ ಸೈಯದ್ ಅಲಿ, ಬೆಳ್ಮ ರೆಂಜಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಕುಂಡೂರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕರ್ ಸ್ವಾಗತ್, ಎಸ್‌ವೈಎಸ್ ಅಧ್ಯಕ್ಷ ಹಾಜಿ ಮುಹಮ್ಮದ್ ಅಲಿ, ಕಾರ್ಯದರ್ಶಿ ಹಾಜಿ ಸಿದ್ದೀಕ್, ಎಸ್ಕೆಎಸೆಸ್ಸೆಫ್ ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್, ಮುಹಮ್ಮದ್ ನಡುಪದವು, ಅನ್ಸಾರುಲ್ ಮುಸ್ಲಿಮೀನ್‌ನ ಅಧ್ಯಕ್ಷ ಹಾಜಿ ಇಲ್ಯಾಸ್ ಡಿ., ಮದ್ರಸ ಮ್ಯಾನೇಜ್ಮೆಂಟ್ ಉಪಾಧ್ಯಕ್ಷ ಎಂ.ಎ. ಅಬ್ದುಲ್ಲಾ ರೆಂಜಾಡಿ, ಎಸ್ಕೆಎಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ರಿಯಾಝ್ ರಹ್ಮಾನಿ ಕಿನ್ಯ, ಏಶ್ಯನ್ ಅಹ್ಮದ್ ಬಾವಾ ಹಾಜಿ, ಬಿ.ಕೆ.ಇಸ್ಮಾಯಿಲ್ ನಾಟೆಕ್ಕಲ್, ಶಂಸುಲ್ ಉಲಮಾ ಅಕಾಡಮಿ ಕಿನ್ಯ ಇದರ ಪ್ರದಾನ ಕಾರ್ಯದರ್ಶಿ ಸಿರಾಜ್ ತಾಜ್, ಬೆಳ್ಮ ಗ್ರಾಪಂ ಸದಸ್ಯ ಕಬೀರ್ ಡಿ. ಹಾಜಿ, ಕೆ.ಎಸ್.ಫಾರೂಕ್ ಕಲ್ಲಡ್ಕ, ಮುಹಮ್ಮದ್ ಪನೀರ್, ಆಸಿಫ್ ಅಬ್ದುಲ್ಲಾ ಉಳ್ಳಾಲ, ತಾಜುದ್ದೀನ್ ದೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್ಕೆಎಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News