ಪಕ್ಕಲಡ್ಕ: ರಿಫಾಯಿಯ್ಯ ದಫ್ ಕಮಿಟಿಯ ವಾರ್ಷಿಕೋತ್ಸವ

Update: 2019-01-21 14:23 GMT

ಮಂಗಳೂರು, ಜ.21: ಜಮಾಅತ್ ಪರಿಸರದಲ್ಲಿರುವ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಮದುವೆಯಾಗಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಪಕ್ಕಲಡ್ಕ ರಿಫಾಯಿಯ್ಯ ದಫ್ ಕಮಿಟಿಯ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಬಜಾಲ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ನಡೆದ 2 ಜೋಡಿಯ ಸರಳ ವಿವಾಹ ಕಾರ್ಯಕ್ರಮದ ನಿಖಾಹ್ ನೆರವೇರಿಸಿ ಅವರು ಮಾತನಾಡಿದರು.

ಇಹ್ಸಾನ್ ಕರ್ನಾಟಕ ಕನ್‌ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್‌ರ ಹೆಸರಿನಲ್ಲಿ ತಹ್ಲೀಲ್ ಸರ್ಮಾಪಿಸಲಾಯಿತು. ರಿಫಾುಯ್ಯಾ ದಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ತಾಜುಲ್ ಉಲಮಾ ಎಜುಕೇಶನ್‌ನ ಅಧ್ಯಕ್ಷ ಸಿಹಾಬುದ್ದೀನ್ ತಂಙಳ್ ತಲಕ್ಕಿ ಹಾಗೂ ಮಾಜಿ ಕಾರ್ಪೋರೇಟ್ ವಿಶ್ವನಾಥ್ ಸೇವಾದಳ ಪಕ್ಕಲಡ್ಕ, ರಿಫಾಯಿಯ್ಯಿ ದಫ್ಫ್ ಕಮಿಟಿಯ ಅಧ್ಯಕ್ಷ ಝೈನುದ್ಧೀನ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಈಸಾ ಕೋಯ ತಂಙಳ್ ಎಕ್ಕೂರು, ಅಸ್ಸುಫ್ಸ ಫೌಂಡೇಶನ್‌ನ ಅಧ್ಯಕ್ಷ ಮುಹಮ್ಮದ್ ರಶೀದ್ ಸಅದಿ, ಉಮರ್ ಸಖಾಫಿ ಕಲ್ಮಿಂಜೆ, ಯೂಸುಫ್ ಕಾಮಿಲ್ ಸಖಾಫಿ ಬನಾರಿ, ಪಕ್ಕಲಡ್ಕ ಮದ್ರಸ ಮುಹಲ್ಲಿಮರಾದ ಹಾರಿಸ್ ಅಶ್ರಫಿ, ಮುಹಿಯ್ಯುದ್ದೀನ್ ಮುಸ್ಲಿಯಾರ್, ದ.ಕ.ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಟಿ.ಪ್ರವೀಣ್ ಚಂದ್ರ ಆಳ್ವ, ಶಾಫಿ ನರ್ಸಿಂಗ್ ಹೋಮ್‌ನ ನಿರ್ದೇಶಕ ಡಾ.ಝೈನುದ್ಧೀನ್, ಅಬೂಬಕರ್ ಎಂ.ಡಿ, ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಹಾಜಿ ಕೆ.ಎಂ.ಪಿ, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಪಕ್ಕಲಡ್ಕ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ, ಅನ್ವರ್ ಎಸ್.ಎ.ಎಸ್, ರಿಫಾಯಿಯ್ಯೆ ದಫ್ಫ್ ಕಮಿಟಿಯ ಸಂಚಾಲಕ ನೂರುದ್ದೀನ್, ಕಾರ್ಯದರ್ಶಿ ಸಬೀರ್ ಅಹ್ಮದ್, ಕೋಶಾಧಿಕಾರಿ ಯಾಕೂಬ್, ಸದಸ್ಯರಾದ ಮಜೀದ್ ಸಅದಿ, ಹುಸೈನ್, ಮುಹಮ್ಮದ್ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.

ಸದರ್ ಮುಅಲ್ಲಿಂ ಮುಹಮ್ಮದ್ ಅನ್ವರ್ ಅಝ್ಹರಿ ಸ್ವಾಗತಿಸಿದರು. ಮುಹಮ್ಮದ್ ಅನೀಸ್ ವಂದಿಸಿದರು. ಇರ್ಷಾದ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News