ಕನ್ಯಾನ: ಎಕ್ಸಲೆಂಟ್ ಶಾಲೆಯ ವಾರ್ಷಿಕೋತ್ಸವ

Update: 2019-01-21 15:01 GMT

ಮಂಗಳೂರು, ಜ.21: ಕನ್ಯಾನದ ರಹ್ಮಾನಿಯಾ ಜುಮಾ ಮಸೀದಿಯ ಆಶ್ರಯದಲ್ಲಿ ನಡೆಸಲ್ಪಡುವ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಶನಿವಾರ ಜರುಗಿತು.

ಶಾಲಾ ಸಮಿತಿಯ ಉಪಾಧ್ಯಕ್ಷ ಹಾಜಿ ಇಸ್ಮಾಯಿಲ್ ಕಲ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಮದನಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಇಸ್ಮಾಯಿಲ್ ಟಿ. ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವಲ್ಲಿ ಹೆತ್ತವರ ಹಾಗೂ ಅಧ್ಯಾಪಕರ ಜವಾಬ್ದಾರಿ ಮಹತ್ವದ್ದು ಎಂದರು.

ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ನ ಶೈಕ್ಷಣಿಕ ವರ್ಷದ ವರದಿಯನ್ನು ಸಂಚಾಲಕ ಹಬೀಬುರ್ರಹ್ಮಾನ್ ಮಂಡಿಸಿದರು_. ಕಾರ್ಯಕ್ರಮದಲ್ಲಿ ಹಮೀದ್ ಮುಸ್ಲಿಯಾರ್, ಗೌರವಾಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಳಕೋಡಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಗೋಳಿಕಟ್ಟೆ, ಕಾರ್ಯದರ್ಶಿಗಳಾದ ಆಸೀಫ್ ಬನಾರಿ, ಸತ್ತಾರ್ ಮಡಿಯಾಳ, ಕೋಶಾಧಿಕಾರಿ ಅಂದುಂಞಿ ಬನಾರಿ, ಮಜೀದ್ ಚೆಡವು, ಎಸ್.ಕೆ. ಉಮರ್, ಇಬ್ರಾಹೀಂ ಕೊಣಲೆ, ಅಬ್ದುಲ್ ಖಾದರ್ ಸಅದಿ, ಹೈದರಾಲಿ ಸಅದಿ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಭಾಗವಹಿಸಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಧ್ಯಾಪಕಿ ಅಶ್ವಿನಿ ಸ್ವಾಗತಿಸಿದರು. ಮರಿಯಮ್ಮ ವಂದಿಸಿದರು.ಇರ್ಶಾನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News