ಎಸೆಸ್ಸೆಫ್ ವತಿಯಿಂದ ಎಸೆಸ್ಸೆಲ್ಸಿ ಕಾನ್ಫಿಡೆನ್ಸ್ ಟೆಸ್ಟ್

Update: 2019-01-21 15:02 GMT

ಪುತ್ತೂರು, ಜ.21: ಎಸೆಸ್ಸೆಲ್ಸಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯಕ್ಕಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕಾನ್ಫಿಡೆನ್ಸ್ ಟೆಸ್ಟ್ ಪ್ರಯುಕ್ತ ರವಿವಾರ ರಾಜ್ಯದ ಎಲ್ಲಾ ಡಿವಿಷನ್ ಕೇಂದ್ರಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಪರೀಕ್ಷೆ ನಡೆಯಿತು.

ಪುತ್ತೂರಿನ ಡಾ.ಶಿವರಾಮ ಕಾರಂತ ಪ್ರೌಡಶಾಲೆ, ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು, ಕೆ.ಜಿ.ಎನ್ ಪ್ರೌಡಶಾಲೆ ಮಿತ್ತೂರು, ಸರಕಾರಿ ಪ್ರೌಡಶಾಲೆ ಕೆಯ್ಯೂರು ಹಾಗೂ ತ್ವೈಬಾ ಎಜುಕೇಶನ್ ಸೆಂಟರ್ ಈಶ್ವರಮಂಗಲ ತಾಲೂಕಿನ ಪರೀಕ್ಷಾ ಸೆಂಟರ್‌ಗಳಾಗಿದ್ದವು.

ವೀಕ್ಷಕರಾಗಿ ರಾಜ್ಯ ಸಮಿತಿ ಸದಸ್ಯರಾದ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, ಜಿಲ್ಲಾ ಸಮಿತಿಯ ಸದಸ್ಯ ಸಲೀಂ ಮುರ, ಡಿವಿಷನ್ ಅಧ್ಯಕ್ಷ ಝುಬೈರ್ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿ ಶಫೀಕ್ ತಿಂಗಳಾಡಿ ಭಾಗವಹಿಸಿದ್ದರು.

ವಿವಿಧ ಸೆಂಟರ್‌ಗಳಲ್ಲಿ ಪರೀಕ್ಷಾ ಕೊಠಡಿ ನಿಯಂತ್ರಕರಾಗಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಈಶ್ವರಮಂಗಲ, ಡಿವಿಷನ್ ಹೈಸ್ಕೂಲ್ ಕನ್ವೀನರ್ ನಾಸಿರ್ ಕುಕ್ಕಾಜೆ, ಅಶ್ರಫ್ ಕಬಕ, ಇರ್ಶಾದ್ ಗಟ್ಟಮನೆ, ಇಲ್ಯಾಸ್ ಕಟ್ಟತ್ತಾರು, ಶರೀಫ್ ನಗರ, ಸಫ್ವಾನ್ ಕಬಕ, ಹಾಫಿಳ್ ತೌಸೀಫ್ ಕೆಮ್ಮಾನ್, ರಮೀಝ್ ಪರಿಯಾಲ್ತಡ್ಕ, ಸಫ್ವಾನ್ ಪೋಳ್ಯ, ಸಲ್ಮಾನ್ ಕಬಕ ಹಾಗೂ ಸಾದಾತ್ ಈಶ್ವರಮಂಗಲ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News