ಹೃದಯಾಘಾತ: ಕ್ರೈಸ್ತ ಸನ್ಯಾಸಿನಿ ಮೃತ್ಯು

Update: 2019-01-21 16:54 GMT

ಮಂಗಳೂರು, ಜ.21: ಕ್ರೈಸ್ತ ಸನ್ಯಾಸಿನಿಯೊಬ್ಬರು ಹೃದಯ ಸ್ತಂಭನದಿಂದ ಸಾವನಪ್ಪಿದ ಘಟನೆ ನಗರದ ಬಿಜೈನಲ್ಲಿ ಸೋಮವಾರ ನಡೆದಿದೆ.

ಸಿಸ್ಟರ್ ರೇಷ್ಮಾ ಡಿಸೋಜ(23) (ಯುಎಫ್‌ಎಸ್) ಮೃತ ಕ್ರೈಸ್ತ ಸನ್ಯಾಸಿನಿ ಎಂದು ಗುರುತಿಸಲಾಗಿದೆ. ಇವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ವಿದ್ಯಾರ್ಥಿನಿಯಾಗಿದ್ದರು.

ಬಿಜೈ ಕಾನ್ವೆಂಟ್‌ನಲ್ಲಿ ವಾಸವಾಗಿದ್ದ ಇವರನ್ನು ಬೆಳಗ್ಗೆ ನಿತ್ಯದ ಪ್ರಾರ್ಥನೆಗಾಗಿ ಸಹಪಾಠಿಗಳು ಕರೆದಾಗ ಪ್ರತಿಕ್ರಿಯಿಸಲಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಕಂಕನಾಡಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅದಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News