ಅಲ್ ಮದೀನ; ಮಹಿಳಾ ಶರೀಅತ್ ಕಾಲೇಜಿನಲ್ಲಿ ಸನದು ದಾನ ಸಮಾರಂಭ

Update: 2019-01-21 17:52 GMT

ನರಿಂಗಾನ, ಜ . 21: ಅಲ್ ಮದೀನ ಇಸ್ಲಾಂಇಕ್ ಕಾಂಪ್ಲೆಕ್ಸ್ ಇದರ ಬೆಳ್ಳಿ ಹಬ್ಬ ಮಹಾ ಸಮ್ಮೇಳನದ ಅಂಗವಾಗಿ ಅಲ್ ಮದೀನ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪದವಿ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಸಮಾರಂಭವು ನಡೆಯಿತು. ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್  ಅಧ್ಯಕ್ಷತೆ ವಹಿಸಿದರು. ಅಲ್ ಮದೀನ ಬೆಳ್ಳಿ ಹಬ್ಬ ಸ್ವಾಗತ ಸಮಿತಿ ಚೆಯರ್ಮಾನ್ ಹಾಜಿ ಬಿ.ಮುಮ್ತಝಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಲ್ ಮದೀನ ಕೋಶಾಧಿಕಾರಿ ಮಜೀದ್ ಹಾಜಿ ಪ್ರಾಸ್ತಾವಿಕ ಭಾಷಣ ಮಾಡಿದರು, ಕಾಲೇಜಿನ ಪ್ರಾಂಶುಪಾಲರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸ್ವಾಗತಿಸಿದರು. ಅಬ್ದುಲ್ ಖಾದರ್ ಸಖಾಫಿ ಸನದು ದಾನ ಭಾಷಣ ಮಾಡಿದರು. ಅಲ್ ಮದೀನ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆಯುವ ವಿದ್ಯಾರ್ಥಿನಿಗಳಿಗೆ ಶರಫುಲ್ ಉಲಮಾ  “ಸ್ವಾಫಿಯ” ಪದವಿ ಘೋಷಿಸಿದರು. ಈ ಸಂದರ್ಭದಲ್ಲಿ  73 ವಿದ್ಯಾರ್ಥಿನಿಯರಿಗೆ ಪದವಿ ನೀಡಿ ಗೌರವಿಸಲಾಯಿತು.

ಕಾಲೇಜಿನ ಸಹ ಪ್ರಾಂಶುಪಾಲೆ ಖದೀಜತುಲ್ ಕುಬ್ರಾ ರವರಿಗೆ  ಅಲ್ ಮದೀನ ಸಂಸ್ಥೆಯ ವತಿಯಿಂದ ’ ಆಸ್ವಿಮ” ಎಂಬ ವಿಶೇಷ ಬಿರುದು ನೀಡಲಾಯಿತು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ, ಉಳ್ಳಾಲ ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಸಯ್ಯಿದ್  ಖುಬೈಬ್ ತಂಙಳ್, ಹಾಜಿ ಅಬ್ದುಲ್ಲ ಮೋರ್ಲ, ಖಾಸಿಂ ಬೋಳಿಯಾರ್, ಸಿದ್ದೀಕ್ ಹಾಜಿ ದೇರಳಕಟ್ಟೆ ಏಶಿಯನ್ ಬಾವ ಹಾಜಿ, ಅಬ್ದುಲ್ ಕರೀಂ ಉಳ್ಳಾಲ, ಕುಂಞಿ ಬಾವ ಹಾಜಿ ಕಲ್ಕಟ್ಟ, ಶೌಕತ್ ಹಾಜಿ ದೇರಳಕಟ್ಟೆ, ಸಲಾಂ ಅಹ್ಸನಿ, ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುರ್ರಝಾಕ್ ನಾವೂರು, ಅಬೂಬಕರ್ ಮದನಿ ಪಡಿಕ್ಕಲ್ ಹನೀಫ್ ಮಾಸ್ಟರ್, ಗಫೂರ್ ಸಖಾಫಿ,  ಉಪಸ್ಥಿತರಿದ್ದರು. ಇರ್ಶಾದ್ ಮದನಿ ಕಾರ್ಯಕ್ರಮ ನಿರ್ವಹಿಸಿದರು.

ಉಮರ್ ಫಾರೂಕ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News