ಎಸ್.ವೈ.ಎಸ್ ಅರಬನ ವಳವೂರು ಬ್ರಾಂಚ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2019-01-21 17:57 GMT

ಬಂಟ್ವಾಳ,ಜ.21: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SYS)ಇದರ ಅರಬನ ವಳವೂರು ಬ್ರಾಂಚ್ ನ ನೂತನ ಸಮಿತಿಯ ರಚನಾ ಸಂಗಮ ಮತ್ತು ಅಧ್ಯಯನ ತರಗತಿ ಎಸ್ಸೆಸ್ಸೆಫ್ ಮಂಗಳೂರು ಡಿವಿಶನ್ ಮಾಜಿ‌ ಅಧ್ಯಕ್ಷ ಮನ್ಸೂರ್ ಮದನಿ‌ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಅರಬನ ವಳವೂರು ಶಾಖಾ ಕಚೇರಿಯಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಅರಬನ ವಳವೂರು ಬ್ರಾಂಚ್ ಗೆ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ವಿ.ಎ.ಮುಹಮ್ಮದ್ ಸಖಾಫಿ ವಳವೂರು, ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಾಗು ಇಕ್ಬಾಲ್ ಮುಈನಾಬಾದ್, ಪ್ರದಾನ ಕಾರ್ಯದರ್ಶಿಯಾಗಿ ಉಮರ್ ಮುಈನಾಬಾದ್, ಜೊತೆ ಕಾರ್ಯದರ್ಶಿಗಳಾಗಿ ಸಿದ್ದೀಖ್ ಸಖಾಫಿ ಹಾಗೂ ಹಂಝ ವಳವೂರು ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ರಹೀಂ ವಳವೂರು ಹಾಗು ಮೂವತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಜಿಲ್ಲಾ ಉಪಾಧ್ಯಕ್ಷ ಸಿದ್ದೀಖ್ ಸಖಾಫಿ ಮೂಳೂರು ಹಾಗೂ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News