ಅಲ್ ಮದೀನ: 25 ವಧುಗಳಿಗೆ ವಸ್ತ್ರ ವಿತರಣೆ

Update: 2019-01-21 17:56 GMT

ನರಿಂಗಾನ, ಜ. 21: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ನರಿಂಗಾನ ಇದರ ಜ. 31 ರಿಂದ ಫೆಬ್ರವರಿ 3 ರ ತನಕ ನಡೆಯುವ ಬೆಳ್ಳಿಹಬ್ಬ ಮಹಾ ಸಮ್ಮೇಳನದ ಪ್ರಯುಕ್ತ ಫೆ. 2ರಂದು ನಡೆಯುವ 25 ಜೋಡಿ ಸಾಮೂಹಿಕ ವಿವಾಹದ ವಧುಗಳಿಗೆ ವಸ್ತ್ರ ವಿತರಣಾ ಸಮಾರಂಭವು ಅಲ್ ಮದೀನಾದಲ್ಲಿ ನಡೆಯಿತು.

ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಲ್ ಮದೀನಾ ಬೆಳ್ಳಿಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಬಿ. ಮುಮ್ತಾಝ್ ಅಲಿ ಉದ್ಘಾಟಿಸಿದರು.

ಅಲ್ ಮದೀನಾ ಕೋಶಾಧಿಕಾರಿ ಮಜೀದ್ ಹಾಜಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಬ್ದುಲ್ಲಾ ಹಾಜಿ ಮೋರ್ಲ, ಹಸನ್ ಹಾಜಿ ಸಾಂಬಾರ್‍ತೋಟ, ಸುಲೈಮಾನ್ ಹಾಜಿ ಸಾಮನಿಗೆ, ಬಾವ ಹಾಜಿ ಪಂಜಲ, ಅಬ್ಬಾಸ್ ಸಖಾಫಿ ಕೊಡಂಚಿಲ್, ಹುಸೈನ್ ಮುಸ್ಲಿಯಾರ್ ಉದ್ಯಾವರ, ಅನ್ವರ್ ಮರ್ಝೂಖಿ, ಇಕ್ಬಾಲ್ ಮರ್ಝೂಖಿ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು, ಅಬ್ದುರ್ರಝಾಕ್ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News