ಎಡಿಸಿ ಕುಮಾರ್‌ ಅವರಿಗೆ ಪಿಎಚ್‌ಡಿ

Update: 2019-01-21 18:04 GMT

ಮಂಗಳೂರು, ಜ.21: ದ.ಕ. ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮಂಡಿಸಿರುವ ‘ದಿ ರೋಲ್ ಆಫ್ ಇ-ಗವರ್ನೆನ್ಸ್ ಇನ್ ಮಾಡರ್ನೈಸೇಷನ್ ಆಫ್ ಲ್ಯಾಂಡ್ ರೆಕಾರ್ಡ್ಸ್: ಎ ಸೋಷಿಯಾಲಜಿಕಲ್ ಸ್ಟಡಿ ಇನ್ ಕರ್ನಾಟಕ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.

ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಗುರುಲಿಂಗಯ್ಯ ಮಾರ್ಗದರ್ಶನದಲ್ಲಿ ಕುಮಾರ್ ಈ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.

ಐದು ವರ್ಷಗಳಿಂದ ಸಂಶೋಧನೆ ಕೈಗೊಂಡಿದ್ದ ಇವರು, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭೂ ದಾಖಲೆಗಳ ಆಧುನೀಕರಣ ಕುರಿತು ಅಧ್ಯಯನ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News