ಕಂದಕ್ ಸೂಪರ್ ಲೀಗ್: ರೇಂಜರ್ಸ್ ಬೆಂಗ್ರೆ ತಂಡಕ್ಕೆ ಪ್ರಶಸ್ತಿ

Update: 2019-01-21 18:05 GMT

ಮಂಗಳೂರು, ಜ. 21: ಸಿಟಿಜನ್ ಕಂದಕ್ ಪುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಕಂದಕ್ ಸೂಪರ್ ಲೀಗ್ ಪುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಇತ್ತೀಚೆಗೆ ರೇಂಜರ್ಸ್ ಬೆಂಗ್ರೆ ತಂಡ ಸಿಟಿಜನ್ ಕಂದಕ್ ಕ್ಲಬ್ ತಂಡವನ್ನು ಪಂದ್ಯದಲ್ಲಿ 0-0 ಗೋಲುಗಳ ಅಂತರದಿಂದ ಸಮಬಲ ಸಾಧಿಸಿ, ಟ್ರೈಬೇಕರ್ ಮೂಲಕ 3-2 ಗೋಲು ಹೊಡೆತಗಳ ಮಣಿಸುವುದರ ಮೂಲಕ ಕಂದಕ್ ಸೂಪರ್ ಲೀಗ್ ಪ್ರಶಸ್ತಿ ಪಡೆದುಕೊಂಡಿತು.

ಪಂದ್ಯಾಟದ ಬಳಿಕ ಸನ್ಮಾನ, ಸಮಾರಂಭದಲ್ಲಿ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಪಾಲಿಕೆ ಉಪ-ಮೇಯರ್ ಕೆ.ಮುಹಮ್ಮದ್, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್, ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಾಂ, ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಹುಸೈನ್ ಬೋಳಾರ್, ನೌಫಲ್ ತಲಶೇರಿ, ನಾಸೀರ್ ಬೋಳಾರ್ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಟೂರ್ನಿಯ ಟಾಪ್ ಸ್ಕೋರರ್ ಸಿಟಿಜನ್ ಕಂದಕ್ ಮಂಚೂಣಿ ಆಟಗಾರ ಯುನೂಸ್, ಗೋಲ್ ಕೀಪರ್ ಆಗಿ ಸಿಟಿಜನ್ ಆಟಗಾರ ಮುಬೀನ್, ಫಾರ್ವರ್ಡ್ ಆಟಗಾರನಾಗಿ ಪಾಂಡೇಶ್ವರ ಎಫ್.ಸಿ. ಆಟಗಾರ ಜಸೀಂ ಹಾಗೂ ಡಿಫೆಂಡರ್ ಆಗಿ ವಿಜೇತ ತಂಡದ ನಾಯಕ ಶುಭಂ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News