ಉಡುಪಿ: ರೋಟರಿ ಜಿಲ್ಲಾಮಟ್ಟದ ರೋಟರ್ಯಾಕ್ಟ್ ಸಮ್ಮೇಳನ
ಉಡುಪಿ, ಜ.22: ಉತ್ತಮ ಒಡನಾಟ, ಸೇವಾ ಮನೋಭಾವದ ಜೊತೆಗೆ ಅವಕಾಶಗಳನ್ನು ಬಳಸಿಕೊಂಡಾಗ ಯಶಸ್ಸು ನಿಶ್ಚಿತ. ರೋಟರ್ಯಾಕ್ಟ್ ಅವಕಾಶಗಳ ಆಗರವಾಗಿದ್ದು, ವ್ಯಕ್ತಿತ್ವದ ವಿಕಸನದ ಜೊತೆಗೆ ಆತ್ಮವಿಶ್ವಾಸ ವೃದ್ಧಿಯಾಗಿ ವಿಶಿಷ್ಠ ಜೀವನಾನುಭವ ನೀಡುತ್ತದೆ ಎಂದು ರೋಟರಿ 3180ರ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಅಂಬಲಪಾಡಿಯ ಹೊಟೇಲ್ ಕಾರ್ತಿಕ್ ಎಸ್ಟೇಟ್ ಸಭಾಂಗಣ ದಲ್ಲಿ ಜ.20ರಂದು ಆಯೋಜಿಸಲಾದ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರ್ಯಾಕ್ಟ್ ಕ್ಲಬ್‌ಗಳ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ರಾಜಾರಾಮ ಭಟ್ ಮಾತನಾಡಿ ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೇಸಿ ತರ ಬೇತುದಾರ ರಾಜೇಂದ್ರ ಭಟ್, ಸಮಾಜಸೇವಕ ನವೀನ್ ಅಮೀನ್ ಶಂಕರ ಪುರ, ಗೋವಾ ಬಂಟರ ಸಂಘದ ಅಧ್ಯಕ್ಷ ಮುರಳಿಮೊಹನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಮಣಿಪಾಲ ರೋಟರಿ ಅಧ್ಯಕ್ಷ ಅಮಿತ್ ಅರವಿಂದ್, ಶಂಕರಪುರ ರೋಟರಿ ಅಧ್ಯಕ್ಷ ಚಂದ್ರ ಪೂಜಾರಿ, ಸುಬಾಸ್‌ನಗರ ರೋಟರ್ಯಾಕ್ಟ್ ಸಬಾಪತಿ ಡೇನಿಯಲ್ ಸಿ.ಅಮ್ಮನ್ನ ಉಪಸ್ಥಿತರಿದ್ದರು.
ಸುಭಾಸ್‌ನಗರ ರೋಟರ್ಯಾಕ್ಟ್ ಅಧ್ಯಕ್ಷ ರಾಯನ್ ಫೆರ್ನಾಂಡಿಸ್ ಸ್ವಾಗತಿಸಿ ದರು. ಸಮ್ಮೇಳನದ ಸಭಾಪತಿ ಗ್ಲಾಡ್ಸನ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ವಂದಿಸಿದರು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ಜಿಲ್ಲೆಗಳಿಂದ 400ಕ್ಕೂ ಅಧಿಕ ಪ್ರತಿನಿಧಿ ಗಳು ಬಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.