ಫೆ. 8-10: ಮಂಗಳೂರಿನಲ್ಲಿ 'ಬ್ಯಾರಿ ಮೇಳ-2019'

Update: 2019-01-22 15:27 GMT

ಮಂಗಳೂರು, ಜ. 22: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಇದರ ಪ್ರಾಯೋಜಕತ್ವದಲ್ಲಿ ಫೆಬ್ರವರಿ 8ರಿಂದ 10ರವರೆಗೆ ಮಂಗಳೂರಿನ ಪುರಭವನದಲ್ಲಿ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ. 8ರಂದು ಸಂಜೆ 4 ಗಂಟೆಗೆ ಬ್ಯಾರಿ ಮೇಳ ಉದ್ಘಾಟನೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಸಚಿವರುಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ.

ಈ ಮೇಳದಲ್ಲಿ  ಬ್ಯಾರಿ ಸಮುದಾಯದ ಉದ್ಯಮಶೀಲತೆಯನ್ನು ಪ್ರತಿಬಿಂಬಿಸುವ ಮಳಿಗೆಗಳನ್ನು  ಪ್ರದರ್ಶಿಸಲಾಗುವುದು. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ರವರೆಗೆ ವಸ್ತುಪ್ರದರ್ಶನ ನಡೆಯಲಿದೆ ಹಾಗೂ ಸಂಜೆ 5ರಿಂದ 9ರವರೆಗೆ ಬ್ಯಾರಿ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಪ್ರಚುರಪಡಿಸುವ ಕಾರ್ಯಕ್ರಮಗಳು ನಡೆಯಲಿವೆ.

ಈ ವಸ್ತು ಪ್ರದರ್ಶನಕ್ಕೆ ಕರ್ನಾಟಕ ರಾಜ್ಯದಿಂದ ಹಾಗೂ ಗಲ್ಫ್ ರಾಷ್ಟ್ರಗಳಿಂದ ಬ್ಯಾರಿ ಉದ್ಯಮಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷರಾದ ಎಸ್.ಎಮ್. ರಶೀದ್ ಹಾಜಿ ಹಾಗೂ ಬ್ಯಾರಿ ಮೇಳ 2019ರ ಸಂಚಾಲಕರಾದ ಮನ್ಸೂರ್ ಅಹ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News