ವಂಡ್ಸೆ ತಾಜ್ಯ ಸಂಪನ್ಮೂಲ ಘಟಕ ದೇಶಕ್ಕೆ ಮಾದರಿ: ಎನ್. ಶೀನ ಶೆಟ್ಟಿ

Update: 2019-01-22 14:43 GMT

ಉಡುಪಿ, ಜ. 22: ಕುಂದಾಪುರ ತಾಲೂಕು ವಂಡ್ಸೆ ಗ್ರಾಪಂನ ಘನ ತ್ಯಾಜ್ಯ ಗಳನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕವು ದೇಶಕ್ಕೆ ಮಾದರಿಯಾಗಿದೆ ಎಂದು ಮಹಾತ್ಮಾಗಾಂಧಿ ನರೇಗಾದ ಮಾಜಿ ಓಂಬುಡ್ಸ್‌ಮೆನ್ ಹಾಗೂ ದಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್.ಶೀನ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಹಾಗೂ ಜೀವ ಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮತ್ತು ಇತರ ಘನ ತ್ಯಾಜ್ಯಗಳನ್ನು ಮೂಲದಲ್ಲೆ ವಿಂಗಡಿಸಿ ಕ್ರಮದಲ್ಲಿ ಸಂಗ್ರಹಿಸಿ, ಸಮ ರ್ಪಕ ವಾಗಿ ನಿರ್ವಹಿಸಿ ಸಂಪನ್ಮೂಲವಾಗಿ ಪರಿವರ್ತಿಸಿ, ಆದಾಯೋತ್ಪನ್ನ ಚಟುವಟಿಕೆ ಗಾಗಿ ಉದ್ಯೋಗ ಸೃಷ್ಟಿಸಿದ ವಂಡ್ಸೆ ಘನ (ತ್ಯಾಜ್ಯ) ಸಂಪನ್ಮೂಲ ನಿರ್ವಹಣಾ ಘಟಕವು ಉಡುಪಿ ಜಿಲ್ಲೆಯ ಸ್ವಚ್ಛತಾ ಅಭಿಯಾನದ ಹೊಸ ಅವಿಷ್ಕಾರವಾಗಿದೆ ಎಂದವರು ಹೇಳಿದರು.

ಜಿಲ್ಲಾಡಳಿತ, ಜಿಪಂ ನೀಡಿದ ಸೂಕ್ತ ತರಬೇತಿ ಹಾಗೂ ನಿರಂತರ ಬೆಂಬಲ ಸಮುದಾಯದ ಸಹಬಾಗಿತ್ವದಲ್ಲಿ ವಂಡ್ಸೆ ಗ್ರಾಪಂನ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳೇ ಈ ಸಾಧನೆಗೆ ಮೂಲ ಕಾರಣವಾಗಿದ್ದು, ಇದು ದೇಶಕ್ಕೆ ಮಾದರಿ ಯಾಗಿದೆ ಎಂದವರು ತಿಳಿಸಿದ್ದಾರೆ.

ಇತ್ತೀಚೆಗೆ ವಂಡ್ಸೆ ಗ್ರಾಪಂ ವಠಾರದಲ್ಲಿರುವ ಘನ ದ್ರವ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ದ.ಕ. ಜಿಲ್ಲಾ ಪತ್ರಕರ್ತ ಸಂಘದಉಪಾಧ್ಯಕ್ಷ ಅನ್ಸಾರ್ ಇನೋಳಿ ಅವರನ್ನು ಒಳಗೊಂಡ ಅಧ್ಯಯನ ತಂಡವು ಭೇಟಿ ನೀಡಿ ವೀಕ್ಷಿಸಿದೆ. ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪಂಚಾಯತ್ ಅಧಿಕಾರಿಗಳು ಸಂಪನ್ಮೂಲ ನಿರ್ವಹಣಾ ಕಾರ್ಯತಂಡದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News