ಬಂಟ್ವಾಳ: ಟಿ.ಆರ್.ಎಫ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ

Update: 2019-01-22 15:12 GMT

ಮಂಗಳೂರು, ಜ. 22: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ತಾಲೂಕು ಜಂಟಿ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಆಯ್ದ ಸರಕಾರಿ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಕಾರ್ಯಾಗಾರ ವಿವಿಧ ಶಾಲೆಗಳಲ್ಲಿ ನಡೆಯಿತು.

ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ಸಲುವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳ ಜೊತೆಗೆ ಪ್ರೇರಣಾ ತರಗತಿಯನ್ನು ಶಿಕ್ಷಕರಿಂದ ನಡೆಸಲಾಯಿತು.

ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆಗಳಾದ ನಂದಾವರ, ಕೊಡಂಗೆ, ಸಜಿಪನಡು, ಸಜಿಪಮೂಡ, ನಾರ್ಶ ಮೈದಾನ, ಗೋಳ್ತಮಜಲು, ಸುರಿಬೈಲು ಮತ್ತು ಮುಡಿಪು ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.

ಎಲ್ಲಾ ಕೇಂದ್ರಗಳಲ್ಲಿ ಪ್ರೇರಣಾ ತರಗತಿಯನ್ನು ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ನಡೆಸಿದರು. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಹೇಮಾ, ಸ.ಪ.ಪೂ. ಕಾಲೇಜು ಬೆಂಜನಪದವು, ದರ್ಶನ್, ಸರಕಾರಿ ಪ್ರೌಢಶಾಲೆ ಕಡೇಶಿವಾಲಯ, ರಾಧಾಕೃಷ್ಣ ಬಾಳಿಗಾ, ಶಾರದಾ ಪ್ರೌಢಶಾಲೆ ಪಾಣೆಮಂಗಳೂರು, ಸುಬ್ರಹ್ಮಣ್ಯ ಭಟ್, ಸರಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು, ರಮೇಶ್ ಆಚಾರ್, ಸರಕಾರಿ ಪ್ರೌಢಶಾಲೆ ಬಿಳಿಯೂರು, ಮಾರ್ಕ್ ಪಿಂಟೋ, ಸರಕಾರಿ ಪ್ರೌಢಶಾಲೆ ಪಂಜಿಕಲ್ಲು, ಪೂರ್ಣಿಮಾ, ಸರಕಾರಿ ಪ್ರೌಢಶಾಲೆ ಪೊಳಲಿ, ಸುಜಾತ, ಸರಕಾರಿ ಪ್ರೌಢಶಾಲೆ ಗೋಳ್ತಮಜಲು, ಪ್ರತಿಭಾ ಭಟ್, ಸ.ಪ.ಪೂ.ಕಾಲೇಜು ಬೆಂಜನಪದವು, ಪರಮೇಶ್ವರ ಹೆಗಡೆ, ಸರಕಾರಿ ಪ್ರೌಢಶಾಲೆ, ಕಾಡುಮಠ, ವೆಂಕಟರಮಣ ಆಚಾರ್, ಸ.ಪ.ಪೂ.ಕಾಲೇಜು ಸಜಿಪಮೂಡ, ಸದಾಶಿವ ನಾಯಕ್, ಸರಕಾರಿ ಪ್ರೌಢಶಾಲೆ ಶಂಭೂರು, ಪ್ರವೀಣ್ ಕುಮಾರ್, ಸರಕಾರಿ ಪ್ರೌಢಶಾಲೆ ಬೊಳಂತಿಮೊಗರು, ರಾಜ್ ಗೋಪಾಲ್ ಜೋಶಿ, ಜನತಾ ಪ್ರೌಢಶಾಲೆ ಅಡ್ಯನಡ್ಕ, ರಾಮಮೂರ್ತಿ, ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು, ಗಣೇಶ್, ಸ.ಪ.ಪೂ. ಕಾಲೇಜು ಸಜಿಪಮೂಡ, ಲಕ್ಷ್ಮಣ್, ಸರಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು ಭಾಗವಹಿಸಿದ್ದರು.

ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ ಶಿವರಾಮಯ್ಯ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್, ಶಿಕ್ಷಣ ಸಂಯೋಜಕಿ ಸುಶೀಲ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸದಸ್ಯರಾದ ನಕಾಶ್ ಬಾಂಬಿಲ, ಶಾಹಿದ್ ಮೆಲ್ಕಾರ್ ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News