ಮಂಗಳೂರು 2019 ಸೌಂದರ್ಯ ಸ್ಪರ್ಧೆ: ಶ್ವೇತಾ ಸುವರ್ಣ ವಿಜೇತೆ

Update: 2019-01-22 16:11 GMT

ಮಂಗಳೂರು, ನ.22: ನಗರದ ಪಾತ್‌ವೇ ಎಂಟರ್‌ಪ್ರೈಸಸ್, ಮರ್ಸಿ ಲೇಡಿಸ್ ಸಲೂನ್ ಮತ್ತು ಪ್ರತಿಭಾ ಸೌನ್ಶಿಮಟ್ ಇನಿಶಿಯೇಟಿವ್ ಸಹಯೋಗದಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಿಸ್ಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 2019 ಸೌಂದರ್ಯ ಸ್ಪರ್ಧೆಯಲ್ಲಿ ಸುರತ್ಕಲ್‌ನ ಶ್ವೇತಾ ಸುವರ್ಣ ವಿಜೇತರಾಗಿದ್ದಾರೆ.

ಬಿಂದು ತಂಕಪ್ಪನ್, ಅನೋಲಾ ಕೆ.ಜೆ., ಡಿ.ವಿ. ಶಿವಕನ್ಯ ಪ್ರಥಮ ರನ್ನರ್ ಅಪ್, ಸೀಮಾ ರವಿ, ಅನುಷಾ ಪಿಲಾರ್ ದ್ವಿತೀಯ ರನ್ನರ್ ಅಪ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಕ್ಲಾಸಿಕ್ ವಿಭಾಗದಲ್ಲಿ ವಿಕ್ಟೋರಿಯಾ ಸೆರಾವೊ ವಿಜೇತರಾದರೆ, ಜ್ಯೋತಿ ಶೆಟ್ಟಿ ಪ್ರಥಮ ರನ್ನರ್ ಅಪ್, ಪೂರ್ಣಿಮಾ ಶೆಟ್ಟಿ ದ್ವಿತೀಯ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ ಎಂದು ಪಾತ್‌ವೇ ಸಂಸ್ಥೆ ಮುಖ್ಯಸ್ಥ ದೀಪಕ್ ಗಂಗೂಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ಇಂದಿರಾ ಮೆನನ್ ವಿಜೇತರು. ಜೂಲಿಯಟ್ ಮಸ್ಕರೇನಸ್ ಪ್ರಥಮ ರನ್ನರ್ ಅಪ್, ವಿನ್ನಿ ಫೆರ್ನಾಂಡಿಸ್ ದ್ವಿತೀಯ ರನ್ನರ್ ಅಪ್, ಶ್ಯಾಮಲಾ ಪ್ರಸಾದ್ ತೃತೀಯ ರನ್ನರ್ ಕಿರೀಟ ತನ್ನದಾಗಿಸಿಕೊಂಡರು. ಅಂತಿಮ ವಿಭಾಗದ ಸ್ಪರ್ಧೆಯಲ್ಲಿ 35 ಮಂದಿ ಭಾಗವಹಿಸಿದ್ದರು ಎಂದರು.

ಶ್ವೇತಾ ಸುವರ್ಣ, ಜ್ಯೋತಿ ಶೆಟ್ಟಿ, ಜೂಲಿಯಟ್ ಮಸ್ಕರೇನಸ್, ಮರ್ಸಿ ವೀಣಾ ಡಿಸೋಜ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News