ಸೀ ವಿಜಿಲ್ ಅಣಕು ಕಾರ್ಯಾಚರಣೆ: ಉಡುಪಿ ಜಿಲ್ಲೆಯಲ್ಲಿ ವರದಿಯಾಗಿಲ್ಲ- ಎಸ್ಪಿ

Update: 2019-01-22 15:42 GMT

ಉಡುಪಿ, ಜ.22: ನೌಕಾದಳ, ಭಾರತೀಯ ತಟ ರಕ್ಷಣಾ ದಳ, ಕರಾವಳಿ ಕಾವಲು ಪಡೆ ಮತ್ತು ರಾಜ್ಯ ಪೊಲೀಸ್ ಮತ್ತು ಇತರೆ ರಕ್ಷಣಾ ಘಟಕಗಳು ಜೊತೆ ಗೂಡಿ ಕರಾವಳಿ ಜಿಲ್ಲೆಗಳಲ್ಲಿ ನಡೆಸಿದ ಸೀ ವಿಜಿಲ್-2019 ಅಣಕು ಕಾರ್ಯಾಚರಣೆಗೆ ಸಂಬಂಧಿಸಿ ಇಂದು ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿ ಘಟನೆಗಳು ಸಂಭವಿಸಿರುವ ಕುರಿತು ವರದಿಯಾಗಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀ್ಷಕ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.

ಜ.23ರ ರಾತ್ರಿ 8ರವರೆಗೆ ನಡೆಯುವ ಈ ಅಣುಕು ಕಾರ್ಯಾಚರಣೆಯ ಸಮಯದಲ್ಲಿ ಉಗ್ರವಾದಿಗಳಂತೆ ನಟಿಸಿ ಜನ ನಿಭಿಡ ಪ್ರದೇಶಗಳಾದ ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ, ಮಾಲ್‌ಗಳು, ದೇವಸ್ಥಾನ ಗಳು ಮತ್ತು ಸಮುಚ್ಚಯಕ್ಕೆ ದಾಳಿ ಮಾಡುವುದು ಅಥವಾ ಹುಸಿಬಾಂಬುಗಳನ್ನು ಇಡಬಹುದು. ಸಾರ್ವಜನಿಕರು ಈ ಕಾರ್ಯಚರಣೆಯ ಸಮಯದಲ್ಲಿ ಗಾಬರಿ ಗೊಳ್ಳದೆ, ಸಾರ್ವಜನಿಕರು ಹಾಗೂ ಪ್ರಮುಖ ಸಮುಚ್ಚಯದ ನಿರ್ವಾಹಕರು ಈ ಅಣುಕು ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News