‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕೇವಲ ಗಿಮಿಕ್: ಶಿವಸೇನೆ

Update: 2019-01-22 16:34 GMT

ಮುಂಬೈ, ಜ. 22: ನೂತನ ಆರ್ಥಿಕ ಸಮೀಕ್ಷೆ ಭಾರತದಲ್ಲಿ ಬಡವರು ಹಾಗೂ ಶ್ರೀಮತರ ನಡುವೆ ಹೆಚ್ಚುತ್ತಿರುವ ಕಂದರವನ್ನು ಬೆಳಕಿಗೆ ತಂದಿರುವುದನ್ನು ಉದಾಹರಣೆ ಯಾಗಿ ಉಲ್ಲೇಖಿಸಿದ ಶಿವಸೇನೆ, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ‘ಸಬ್‌ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆ ಕೇವಲ ಗಿಮಿಕ್ ಎಂದು ಹೇಳಿದೆ.

ಕೋಟ್ಯಾಧೀಶರ ಸಂಪತ್ತು ಒಂದು ದಿನದಲ್ಲಿ 2,200 ಕೋ. ರೂ. ಏರಿಕೆಯಾಗುತ್ತಿದೆ. ಶೇ. 1ರಷ್ಟಿರುವ ಶ್ರೀಮಂತರ ಒಡೆತನದಲ್ಲಿ ದೇಶದ ಶೇ. 51.53 ಸಂಪತ್ತು ಇದೆ ಎಂದು ಆಕ್ಸ್‌ಫಾಮ್‌ನ ಇತ್ತೀಚೆಗಿನ ಅಧ್ಯಯನ ಹೇಳಿತ್ತು. ‘‘ಆಕ್ಸ್‌ಫಾಮ್‌ನ ಇತ್ತೀಚೆಗಿನ ವರದಿ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ನ ಸತ್ಯಾಸತ್ಯತೆ ಬಹಿರಂಗಗೊಳಿಸಿದೆ. ಭಾರತದಲ್ಲಿ ಶ್ರೀಮಂತರು ಹಾಗೂ ಬಡವರ ಅಂತರ ಹೆಚ್ಚುತ್ತಿದೆ. ಈ ಸತ್ಯವನ್ನು ವರದಿ ಜಗತ್ತಿನ ಮುಂದೆ ಬಹಿರಂಗಗೊಳಿಸಿದೆ.’’ ಎಂದು ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಹೇಳಿದೆ.

ಈ ವರದಿ ಪ್ರಜ್ಞೆಯುಳ್ಳ ಪ್ರತಿಯೊಬ್ಬನನ್ನು ಆತಂಕಗೊಳ್ಳುವಂತೆ ಮಾಡುತ್ತದೆ. ದೇಶದ ಒಟ್ಟು ಭೂಮಿಯಲ್ಲಿ ಶೇ. 51.53ರಷ್ಟು ಭೂಮಿ ಶೇ. 1ರಷ್ಟು ಜನರ ಹಿಡಿತದಲ್ಲಿ ಇದೆ. ಭಾರತದ ಶೇ. 77.44 ಭೂಮಿಯನ್ನು ಕೇವಲ ಶೇ. 10 ಜನರು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಶೆ. 1 ಇರುವ ಶ್ರೀಮತರ ಸಂಪತ್ತು ದಿನದಲ್ಲಿ 2,200 ಕೋ. ರೂ. ಹೆಚ್ಚುತ್ತಿದೆ’’ ಎಂದು ವರದಿ ಹೇಳಿದೆ ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News