ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
Update: 2019-01-22 22:20 IST
ಬ್ರಹ್ಮಾವರ, ಜ.22: ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಎಂಬಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಹೆರಾಯಿಬೆಟ್ಟುವಿನ ಜೊಸ್ಪಿನ್ ಸುವಾರಿಸ್ (75) ಎಂದುಗುರುತಿಸಲಾಗಿದೆ. ಇವರು ಜ. 20ರಂದು ಬೆಳಗ್ಗೆ ಗ್ಯಾಸ್‌ಸ್ಟವ್‌ನಿಂದ ಚಹಾದ ಪಾತ್ರೆ ಯನ್ನು ಉಟ್ಟ ಸೀರೆಯ ಸೆರಗಿನಿಂದ ಕೆಳಗೆ ಇಳಿಸುವಾಗ ಆಕಸ್ಮಿಕವಾಗಿ ಬೆಂಕಿ ಸೀರೆಗೆ ತಗಲಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಣಿ ಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಜ.21ರಂದು ರಾತ್ರಿ 8ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.