ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2019-01-22 16:50 GMT

ಉಡುಪಿ, ಜ.22: ಮಣಿಪಾಲ ಸಮೀಪದ ವಿದ್ಯಾರತ್ನ ನಗರ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಜ.22ರಂದು ಮಧ್ಯಾಹ್ನ 12.30ರ ಸುಮಾರಿಗೆ ಬಂಧಿಸಿದ್ದಾರೆ.

ಸಾಯಿ ಕೊಠಾರಿ ಮತ್ತು ಶರಣ್ ಬಂಧಿತ ಆರೋಪಿಗಳು. ಇವರಿಂದ 39 ಸಾವಿರ ರೂ. ವೌಲ್ಯದ 1 ಕಿಲೋ 106 ಗ್ರಾಂ ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸಿದ್ದ 20ಸಾವಿರ ರೂ. ವೌಲ್ಯದ ಎರಡು ಮೊಬೈಲ್, ಕಪ್ಪು ಬ್ಯಾಗ್ ಹಾಗೂ ತೂಕದ ಸಾಧನಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News