ಪತ್ನಿ ಜೀವನಾಂಶ ಕೇಳಿದಾಗ ಪತಿ ‘ದಿವಾಳಿ’ ಎನ್ನುತ್ತಾನೆ: ಸುಪ್ರೀಂ ಕೋರ್ಟ್

Update: 2019-01-22 17:01 GMT

ಹೊಸದಿಲ್ಲಿ, ಜ. 22: ಪರಿತ್ಯಕ್ತ ಪತಿ ಜೀವನಾಂಶ ಕೋರಿದರೆ, ಪತಿ ತಾನು ದಿವಾಳಿಯಾಗಿದ್ದೇವೆ, ಕಡು ಬಡತನದಲ್ಲಿ ಜೀವಿಸುತ್ತಿದ್ದೇನೆ ಎಂದು ಹೇಳಲು ಆರಂಭಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ. ಪರಿತ್ಯಕ್ತ ಪತ್ನಿ ಜೀವನಾಂಶ ಕೇಳಿದ ಕಾರಣಕ್ಕೆ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ವೃತ್ತಿಯನ್ನು ಬಿಡಬೇಕೆಂದೇನೂ ಇಲ್ಲ ಎಂದು ಹೈದರಾಬಾದ್ ಮೂಲದ ವೈದ್ಯರಿಗೆ ಸೂಚಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪರಿತ್ಯಕ್ತ ಪತಿಗೆ 15 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡಬೇಕು ಎಂದು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಮಧ್ಯೆ ಪ್ರವೇಶಿಸಲು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ಪೀಠ ನಿರಾಕರಿಸಿತು.

ಪ್ರಸ್ತುತ ತಿಂಗಳಿಗೆ 15 ಸಾವಿರ ರೂಪಾಯಿಯಲ್ಲಿ ಮಗುವಿನ ನಿರ್ವಹಣೆ ಸಾಧ್ಯವೇ ಎಂಬುದನ್ನು ಅವರಿಗೆ ತಿಳಿಸಿ. ಈಗ ಪತ್ನಿ ಜೀವನಾಂಶ ಕೋರಿದ ಕೂಡಲೆ ಪತಿ ತಾನು ದಿವಾಳಿಯಾಗಿದ್ದೇನೆ, ಕಡು ಬಡತನದಲ್ಲಿ ಜೀವಿಸುತ್ತಿದ್ದೇನೆ ಎಂದು ಹೇಳಲು ಆರಂಭಿಸುತ್ತಾನೆ. ಪತ್ನಿಗೆ ಜೀವನಾಂಶ ನೀಡಬೇಕು ಎಂಬ ಕಾರಣಕ್ಕೆ ನೀವು ಉದ್ಯೋಗ ಬಿಡಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತಿಯ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ವಕೀಲ, ಮಧ್ಯಂತರ ಜೀವನಾಂಶದ ಮೊತ್ತ ಹೆಚ್ಚಾಗಿದೆ ಹಾಗೂ ಉಚ್ಚ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಎಂದು ಕೋರಿದ್ದರು. ಇದಕ್ಕೆ ಪೀಠ, ದೂರುದಾರ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯ. ಅಲ್ಲದೆ, ಕೇವಲ ಮಧ್ಯಂತರ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಇಲ್ಲ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News