ಇರಾನ್ ಆಕ್ರಮಣವನ್ನು ಸಹಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ

Update: 2019-01-22 17:10 GMT

ಟೆಲ್ ಅವೀವ್ (ಇಸ್ರೇಲ್), ಜ. 22: ಇಸ್ರೇಲ್ ಇರಾನ್‌ನ ಆಕ್ರಮಣವನ್ನು ಸಹಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಹೇಳಿದ್ದಾರೆ.

ಕ್ಷಿಪಣಿ ದಾಳಿಯೊಂದಕ್ಕೆ ಪ್ರತಿಯಾಗಿ ಸಿರಿಯದಲ್ಲಿರುವ ಇರಾನ್‌ನ ನೆಲೆಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ ಬಳಿಕ, ದಕ್ಷಿಣ ಇಸ್ರೇಲ್‌ನಲ್ಲಿ ನೂತನ ವಿಮಾನ ನಿಲ್ದಾಣವೊಂದನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘‘ಇಸ್ರೇಲ್‌ ನತ್ತ ಇರಾನ್ ಕ್ಷಿಪಣಿಯೊಂದನ್ನು ಹಾರಿಸಿದ ಬಳಿಕ, ಸಿರಿಯದಲ್ಲಿರುವ ಇರಾನ್‌ನ ನೆಲೆಗಳ ಮೇಲೆ ನಿನ್ನೆ ಸಂಜೆ ವಾಯು ಪಡೆ ಪ್ರಬಲ ದಾಳಿ ನಡೆಸಿತು’’ ಎಂದು ಅವರು ಹೇಳಿದರು.

‘‘ಇಂಥ ಆಕ್ರಮಣ ನಡೆಯಲು ನಾವು ಬಿಡುವುದಿಲ್ಲ. ನಾವು ಇರಾನ್ ವಿರುದ್ಧ ಹಾಗೂ ಇರಾನ್ ಆಕ್ರಮಣದ ಉಪಕರಣಗಳಾಗಿರುವ ಸಿರಿಯ ಸೇನೆಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News