ಫೆಲೆಸ್ತೀನ್‌ಗೆ ಅಮೆರಿಕದ ಆರ್ಥಿಕ ನೆರವು ಕಡಿತ: ಮೂಲಸೌಕರ್ಯ ಯೋಜನೆಗಳು ಸ್ಥಗಿತ

Update: 2019-01-22 17:15 GMT

ಜೆರುಸಲೇಮ್, ಜ. 22: ಸಾವಿರಾರು ಫೆಲೆಸ್ತೀನಿಯರು ಈಗ ಅಮೆರಿಕದಿಂದ ಆಹಾರ ನೆರವು ಅಥವಾ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆಯುತ್ತಿಲ್ಲ, ಅಮೆರಿಕದ ಹಣದಿಂದ ನಡೆಯುತ್ತಿದ್ದ ಮೂಲಸೌಕರ್ಯ ಯೋಜನೆಗಳು ನಿಂತಿವೆ ಹಾಗೂ ಜೆರುಸಲೇಮ್‌ನಲ್ಲಿನ ವಿನೂತನ ‘ಶಾಂತಿ ನಿರ್ಮಾಣ ಯೋಜನೆ’ಯೂ ತನ್ನ ಚಟುವಟಿಕೆಗಳನ್ನು ನಿಧಾನಗೊಳಿಸಿದೆ.

ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ 200 ಮಿಲಿಯ ಡಾಲರ್ (ಸುಮಾರು 1,427 ಕೋಟಿ ರೂಪಾಯಿ) ನೆರವನ್ನು ನಿಲ್ಲಿಸಿದ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ.

ಸರಕಾರೇತರ ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ ಹಾಗೂ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿವೆ.

ಅಮೆರಿಕ ಸರಕಾರದ ಅಭಿವೃದ್ಧಿ ಸಂಸ್ಥೆ ‘ಯುಎಸ್‌ಏಡ್’ 1994ರಿಂದ ಫೆಲೆಸ್ತೀನಿಯರಿಗೆ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಆಡಳಿತ ಮತ್ತು ಮಾನವೀಯ ನೆರವಿಗಾಗಿ 5.5 ಬಿಲಿಯ ಡಾಲರ್ (ಸುಮಾರು 39,250 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ನೀಡಿದೆ. ಮುಂದೆ ಸ್ವತಂತ್ರ ದೇಶವಾಗುತ್ತದೆ ಎಂಬ ನಿರೀಕ್ಷೆಯಿಂದ ಈ ನೆರವನ್ನು ನೀಡಲಾಗಿತ್ತು.

ಆ ಪೈಕಿ ಹೆಚ್ಚಿನ ಹಣವನ್ನು ಅಂತಾರಾಷ್ಟ್ರೀಯ ಎನ್‌ಜಿಒಗಳ ಮೂಲಕ ನೀಡಲಾಗಿತ್ತು. ಈಗ ಅವುಗಳಿಗೆ ನಿಧಿ ಕಡಿತದ ವಿಷಯವನ್ನು ಕಳೆದ ಬೇಸಿಗೆಯಲ್ಲಿ ತಿಳಿಸಲಾಗಿದೆ. ಈಗ ಅವುಗಳು ತಮ್ಮ ಕಾರ್ಯಕ್ರಮಗಳನ್ನು ಮುಂದುವರಿಸಲು ಪರದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News