ಬೋಗೋಡಿ: ಜ. 26ರಂದು ಬುರ್ದಾ ಮಜ್ಲಿಸ್, ನಅತೇ ಶರೀಫ್

Update: 2019-01-22 17:16 GMT

ಬಂಟ್ವಾಳ, ಜ. 22: ಸಲ್-ಸಬೀಲ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಬೋಗೋಡಿ-ಪಾಣೆಮಂಗಳೂರು ಇದರ 5ನೆ ವಾರ್ಷಿಕೋತ್ಸವದ ಪ್ರಯುಕ್ತ ಬುರ್ದಾ ಮಜ್ಲಿಸ್, ನಅತೇ ಶರೀಫ್ ಹಾಗೂ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮ ಜ. 26 ರಂದು ಆಲಡ್ಕ ಮೈದಾನದಲ್ಲಿ ನಡೆಯಲಿದೆ.

ಆಲಡ್ಕ ಎಂಜೆಎಂ ಮುದರ್ರಿಸ್ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಬಿಜೆಎಂ ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ಉದ್ಘಾಟಿಸುವರು. ಸೈಯದ್ ನಿಝಾಮುದ್ದೀನ್ ಬಾಫಖಿ ತಂಙಳ್ ಕೊೈಲಾಂಡಿ ದುವಾಶಿರ್ವಚನಗೈಯುವರು. ಮಾಜಿ ಸಚಿವ ಬಿ. ರಮಾನಾಥ ರೈ ವಿಶೇಷ ಪುರವಣಿ ಬಿಡುಗಡೆಗೊಳಿಸುವರು. ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ಲಾ ರಹ್ಮಾನಿ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಾರಿಸ್ ಅಬ್ದುಲ್ಲಾ ಹುದವಿ ತಾನೂರು ನೇತೃತ್ವದ ರೂಹಿ ಫಿದಾ ಬುರ್ದಾ ಆಂಡ್ ಕವ್ವಾಲಿ ಸಂಘಂ ಚೆಮ್ನಾಡ್-ಕೇರಳ ಇವರು ಬುರ್ದಾ ಆಲಾಪನೆ ನಡೆಸಲಿದ್ದು, ಮಾಸ್ಟರ್ ಉಮರ್ ಸ್ವಲಾಹುದ್ದೀನ್ ಪಾಣೆಮಂಗಳೂರು ಹಾಗೂ ಮಾಸ್ಟರ್ ಸಲ್ಮಾನ್ ಫಾರಿಸ್ ಉಳ್ಳಾಲ ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಲಿದೆ ಎಂದು ಸಲ್-ಸಬೀಲ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಉಮರ್ ಸಾಬಿತ್ ಬೋಗೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News