ಪ್ರಧಾನಿ ಮೋದಿ ಚಹಾ ಮಾರಿಯೇ ಇಲ್ಲ, ಎಲ್ಲವೂ ನಾಟಕ: ವಿಹಿಂಪ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ

Update: 2019-01-22 17:39 GMT

ಹೊಸದಿಲ್ಲಿ,ಜ.22: “ಪ್ರಧಾನಿ ಮೋದಿ ಜೊತೆ ನನ್ನ ಗೆಳೆತನ 43 ವರ್ಷಗಳಷ್ಟು ಹಳೆಯದಾದರೂ ನಾನೆಂದೂ ಅವರು ಚಹಾ ಮಾರುವುದನ್ನು ಕಂಡಿಲ್ಲ” ಎಂದು ವಿಶ್ವಹಿಂದೂ ಪರಿಷದ್‌ನ ಮಾಜಿ ಅಂತರ್‌ರಾಷ್ಟ್ರೀಯ ಕಾರ್ಯವಾಹ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.

ಪ್ರಧಾನಿ ಎಂದೂ ಚಹಾ ಮಾರಿಲ್ಲ. ಅದು ಕೇವಲ ಜನರ ಅನುಕಂಪ ಗಿಟ್ಟಿಸಲು ನಾಟಕ ಎಂದು ತೊಗಾಡಿಯಾ ತಿಳಿಸಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಮ ಮಂದಿರ ನಿರ್ಮಾಣವಾಗುವುದು ಬೇಕಾಗಿಲ್ಲ. ಮೋದಿ ಎರಡನೇ ಅವಧಿಗೆ ಪ್ರಧಾನಿಯಾದರೂ ಅವರು ರಾಮ ಮಂದಿರ ನಿರ್ಮಿಸುವುದಿಲ್ಲ. ಯಾಕೆಂದರೆ ಮಂದಿರ ವಿಷಯ ಬಿಜೆಪಿ ಮತ್ತು ಸಂಘ ಪರಿವಾರವನ್ನು ಜೀವಂತವಿಡುವ ವಿಷಯವಾಗಿದೆ. ಅದು ಬಗೆಹರಿದರೆ ಈ ಎರಡಕ್ಕೂ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಸದ್ಯ ಅಂತರ್‌ರಾಷ್ಟ್ರೀಯ ಹಿಂದು ಪರಿಷದನ್ನು ಮುನ್ನಡೆಸುತ್ತಿರುವ ತೊಗಾಡಿಯ ತಿಳಿಸಿದ್ದಾರೆ.

2019ರ ಚುನಾವಣೆಯ ನಂತರ ಮೋದಿ ಗುಜರಾತ್‌ಗೆ ತೆರಳಬೇಕಾಗುತ್ತದೆ ಮತ್ತು ಸಂಘ ಪರಿವಾರದ ನಾಯಕ ಬೈಯ್ಯಾಜಿ ಜೋಶಿ ನಾಗಪುರಕ್ಕೆ ಮರಳ ಬೇಕಾಗುತ್ತದೆ ಎಂದು ತೊಗಾಡಿಯ ಕುಟುಕಿದ್ದಾರೆ. ನನ್ನ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ 35ಎ ವಿಧಿಯನ್ನು ರದ್ದು ಮಾಡಲಾಗುವುದು ಮತ್ತು ಯಾರು ಬೇಕಾದರೂ ದೇಶದ ಯಾವ ಭಾಗದವರಾದರೂ ಅಲ್ಲಿ ಜಮೀನು ಖರೀದಿಸಬಹುದು ಎಂದು ತೊಗಾಡಿಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News