×
Ad

ಶಿರ್ವ: ಜ.25ರಂದು ಮಂಗಳೂರು ವಿವಿ ಮಟ್ಟದ ವಾಲಿಬಾಲ್ ಟೂರ್ನಿ

Update: 2019-01-23 20:00 IST

ಶಿರ್ವ, ಜ.23: ಇಲ್ಲಿನ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಪದವಿ ಕಾಲೇಜಿ ನಲ್ಲಿ, ಕಾಲೇಜಿನ ಸಂಸ್ಥಾಪಕ ಹಾಗೂ ವಿಜಯಾ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮುಲ್ಕಿ ಸುಂದರರಾಮ್ ಶೆಟ್ಟಿ ಸ್ಮರಣಾರ್ಥ 38ನೇ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪುರುಷ ಮತ್ತು ಮಹಿಳಾ ವಾಲಿಬಾಲ್ ಟೂರ್ನಿ ಜ.25ರಂದು ನಡೆಯಲಿದೆ.

ಟೂರ್ನಿಯನ್ನು ವಿಜಯಾ ಬ್ಯಾಂಕ್‌ನ ಉಡುಪಿ ವಲಯ ಪ್ರಬಂಧಕ ಕೆ.ಆರ್. ರವಿಚಂದ್ರನ್ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News