3 ಬಿಲಿಯ ಡಾಲರ್ ನೆರವು ಪ್ಯಾಕೇಜ್‌ಗೆ ಪಾಕ್, ಯುಎಇ ಸಹಿ

Update: 2019-01-23 16:36 GMT

ಇಸ್ಲಾಮಾಬಾದ್, ಜ. 23: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದ ಕುಸಿಯುತ್ತಿರುವ ಡಾಲರ್ ಮೀಸಲಿಗೆ ಚೇತರಿಕೆ ನೀಡುವ ಅಬುಧಾಬಿಯ ಪ್ರಯತ್ನಗಳ ಭಾಗವಾಗಿ, 3 ಬಿಲಿಯ ಡಾಲರ್ (ಸುಮಾರು 21,400 ಕೋಟಿ ಭಾರತೀಯ ರೂಪಾಯಿ) ನೆರವು ಪ್ಯಾಕೇಜ್‌ಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಂಗಳವಾರ ಸಹಿ ಹಾಕಿವೆ.

ಅಂತಾರಾಷ್ಟ್ರೀಯ ಸಾಲ ಮರುಪಾವತಿ ಬಿಕ್ಕಟ್ಟಿನಿಂದ ಪಾಕಿಸ್ತಾನ ಯಶಸ್ವಿಯಾಗಿ ಪಾರಾಗಲು ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯೊಂದಿಗಿನ ಕಠಿಣ ವ್ಯವಹಾರದಿಂದ ದೂರವಿರಲು ಸಾಧ್ಯವಾಗುವಂತೆ ಪಾಕಿಸ್ತಾನಕ್ಕೆ 3 ಬಿಲಿಯ ಡಾಲರ್ ನೆರವು ನೀಡುವ ಇಂಗಿತವನ್ನು ಯುಎಇ ಕಳೆದ ವರ್ಷದ ಡಿಸೆಂಬರ್‌ನಲ್ಲಿ ವ್ಯಕ್ತಪಡಿಸಿತ್ತು.

ಮಂಗಳವಾರದ ಒಪ್ಪಂದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‌ಬಿಪಿ) ಮುಖ್ಯಸ್ಥ ತಾರಿಖ್ ಬಾಜ್ವ ಮತ್ತು ಅಬುಧಾಬಿ ಫಂಡ್ ಫಾರ್ ಡೆವಲಪ್‌ಮೆಂಟ್ (ಎಡಿಎಫ್‌ಡಿ) ಮಹಾನಿರ್ದೇಶಕ ಜನರಲ್ ಮುಹಮ್ಮದ್ ಸೈಫ್ ಅಲ್ ಸುವೈದಿ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News