24 ಗಂಟೆಗಳಲ್ಲಿ 10.7 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ಕಮಲಾ ಹ್ಯಾರಿಸ್

Update: 2019-01-23 16:39 GMT

ವಾಶಿಂಗ್ಟನ್, ಜ. 23: 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ 24 ಗಂಟೆಯಲ್ಲಿ, ಅಮೆರಿಕದ ಮೊದಲ ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ 1.5 ಮಿಲಿಯ ಡಾಲರ್ (ಸುಮಾರು 10.7 ಕೋಟಿ ರೂಪಾಯಿ) ನಿಧಿ ಸಂಗ್ರಹಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

54 ವರ್ಷದ ಕಮಲಾ, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಸೋಮವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

 ‘‘ಮಹಾತ್ಮಾ ಗಾಂಧಿಯಿಂದ ಸ್ಫೂರ್ತಿ ಪಡೆದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜಯಂತಿಯನ್ನು ಅಮೆರಿಕನ್ನರು ಆಚರಿಸುತ್ತಿರುವ ಸಂದರ್ಭದಲ್ಲಿ ನಾನು ಅಮೆರಿಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ನಿರ್ಧಾರವನ್ನು ಪ್ರಕಟಿಸಲು ಹೆಮ್ಮೆ ಪಡುತ್ತೇನೆ’’ ಎಂದು ಕಮಲಾ ಹೇಳಿದರು.

ಎಬಿಸಿ ಚಾನೆಲ್‌ನ ‘ಗುಡ್ ಮಾರ್ನಿಂಗ್ ಅಮೆರಿಕ’ ಕಾರ್ಯಕ್ರಮದಲ್ಲಿ ಕಮಲಾ ಈ ಘೋಷಣೆ ಮಾಡಿದ ಬಳಿಕ, ಅವರ ಚುನಾವಣಾ ಪ್ರಚಾರಕ್ಕಾಗಿ 38,000 ದೇಣಿಗೆದಾರರು 1.5 ಮಿಲಿಯ ಡಾಲರ್ (ಸುಮಾರು 10.7 ಕೋಟಿ ರೂಪಾಯಿ) ದೇಣಿಗೆ ನೀಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News