ನಕಲಿ ಎನ್‌ಕೌಂಟರ್‌ನಲ್ಲಿ ಕುಟುಂಬವೊಂರ ಮೂವರ ಹತ್ಯೆ: ಐವರು ಪಾಕ್ ಪೊಲೀಸರ ವಜಾ

Update: 2019-01-23 16:41 GMT

ಲಾಹೋರ್, ಜ. 23: ಕಳೆದ ವಾರಾಂತ್ಯದಲ್ಲಿ ಕುಟುಂಬವೊಂದರ ಮೂವರು ಸದಸ್ಯರನ್ನು ಹೆದ್ದಾರಿಯಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡ ಬಳಿಕ, ಪಂಜಾಬ್ ಭಯೋತ್ಪಾದಕ ನಿಗ್ರಹ ಇಲಾಖೆಯ ಮುಖ್ಯಸ್ಥನನ್ನು ಪಾಕಿಸ್ತಾನದ ಅಧಿಕಾರಿಗಳು ಮಂಗಳವಾರ ವಜಾಗೊಳಿಸಿದ್ದಾರೆ.

ಅದೇ ವೇಳೆ, ನಕಲಿ ಎನ್‌ಕೌಂಟರ್ ವೇಳೆ ಉಪಸ್ಥಿತರಿದ್ದ ಐವರು ಭಯೋತ್ಪಾದನೆ ನಿಗ್ರಹ ಅಧಿಕಾರಿಗಳ ವಿರುದ್ಧ ಭಯೋತ್ಪಾದನೆ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ.

ಲಾಹೋರ್‌ನಿಂದ 200 ಕಿ.ಮೀ. ದೂರದ ಸಹಿವಾಲ್ ಎಂಬಲ್ಲಿ ನಡೆದ ಶನಿವಾರ ನಡೆದ ಎನ್‌ಕೌಂಟರ್ ‌ನಲ್ಲಿ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಓರ್ವ ಹದಿಹರೆಯದ ಬಾಲಕಿ ಸೇರಿದಂತೆ ನಾಲ್ವರನ್ನು ಹತ್ಯೆಗೈದಿದ್ದರು.

ಓರ್ವ ದಂಪತಿ ತಮ್ಮ ನಾಲ್ವರು ಮಕ್ಕಳು ಮತ್ತು ಚಾಲಕನೊಂದಿಗೆ ಕಾರಿನಲ್ಲಿ ಕೂತಿದ್ದಾಗ ಭದ್ರತಾ ಪಡೆಗಳು ಕಾರಿನ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ್ದರು.

ಬಳಿಕ, ನಾಲ್ವರ ಪೈಕಿ ಮೂವರು- ದಂಪತಿ ಮತ್ತು ಅವರ 13 ವರ್ಷದ ಮಗಳು- ಅಮಾಯಕ ನಾಗರಿಕರು ಎಂಬುದಾಗಿ ಭಯೋತ್ಪಾದನೆ ನಿಗ್ರಹ ಇಲಾಖೆ ಬಳಿಕ ಹೇಳಿದೆ.

ದಂಪತಿಯ ಇತರ ಮೂವರು ಮಕ್ಕಳು ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News