ಬೈಕ್ ಅಪಘಾತ: ಗಾಯಾಳು ಮೃತ್ಯು
Update: 2019-01-23 22:12 IST
ಬ್ರಹ್ಮಾವರ, ಜ. 23: ಹೊಸೂರು ಗ್ರಾಮದ ಕೆಳಕರ್ಜೆ ಹೆಗ್ಗುಣಜೆಡ್ಡು ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೆಂಜೂರಿನ ಬಡಕ್ಕಿನಬೈಲು ನಿವಾಸಿ ರಾಮ ಕುಲಾಲ (73) ಎಂದು ಗುರುತಿಸಲಾಗಿದೆ.
ಇವರು ಬ್ರಹ್ಮಾವರ ಕಡೆಯಿಂದ ಸಂತೆಕಟ್ಟೆ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಸ್ಕೀಡ್ ಆಗಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಜ. 23ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮೃತಪಟ್ಟರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.