ಆವರ್ಸೆ ಗ್ರಾಪಂ: ಮಾಹಿತಿ ಶಿಬಿರ

Update: 2019-01-23 16:51 GMT

ಉಡುಪಿ, ಜ.23: ಜಿಲ್ಲಾ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ಜಿಲ್ಲಾ ವಿಕಲಚೇತನರ ಸಬಲೀಕರಣ ಕೇಂದ್ರ ಉಡುಪಿ ಹಾಗೂ ಆವರ್ಸೆ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ವಿಕಲ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸರಕಾರದ ಸೌಲ್ಯಗಳ ಬಗ್ಗೆ ಮಾಹಿತಿ ಶಿಬಿರ ಆವರ್ಸೆ ಗ್ರಾಪಂನಲ್ಲಿ ಇತ್ತೀಚೆಗೆ ನಡೆಯಿತು.

ಆವರ್ಸೆ ಗ್ರಾಪಂ ಅಧ್ಯಕ್ಷ ಪ್ರಮೋದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯೋಜಕ ಗಣೇಶ್ ಕೊಕ್ಕರ್ಣೆ ಊರಿನ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ರಕ್ಷಣಾ ಕಾಯ್ದೆಯ ಕಾನೂನಿನ ಕುರಿತು ಹಾಗೂ ಹಿರಿಯ ನಾಗರಿಕರ ಸಹಾಯ ವಾಣಿ ಕೇಂದ್ರದಲ್ಲಿ ಹಿರಿಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸವಿತಾ ಕುಂದರ್ ವಿಕಲಚೇತನರ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದರು. ಗ್ರಾಮದ ಆಸು ಪಾಸಿನಲ್ಲಿ ಮಂಗ ಸತ್ತು ಬಿದ್ದರೆ ಕೂಡಲೇ ಪಂಚಾಯಿತಿಗೆ, ಪಶು ವೈದ್ಯಾಧಿಕಾರಿ ಮತ್ತು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಮಾಹಿತಿ ನೀಡುವಂತೆ ತಿಳಿಸಿದ ಅವರು, ಈ ಕಾಯಿಲೆಯನ್ನು ತಡೆಗಟ್ಟುವ ವಿಧಾನದ ಬಗ್ಗೆಯೂ ಮಾಹಿತಿಗಳನ್ನು ನೀಡಿದರು.

ವಿಕಲಚೇತನರ ಇಲಾಖೆಯ ಸುದೀಂದ್ರ ಇವರು ವಿಕಲಚೇತನರಿಗೆ ಸಿಗುವ ಸೌಲ್ಯ ಹಾಗೂ ಅದನ್ನು ಪಡೆದುಕೊಳ್ಳುವ ಕುರಿತು ತಿಳಿಸಿದರು. ಇದಕ್ಕೆ ಇರುವ ಮಾನದಂಡಗಳು, ಗುರುತು ಚೀಟಿ ಪಡಕೊಂಡವರು 10 ವರ್ಷಗಳ ನಂತರ ಇದನ್ನು ನವೀಕರಣ ಮಾಡುವ ಬಗ್ಗೆಯೂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News